Site icon Ullalavani

ಬಿ. ಜನಾರ್ದನ ಪೂಜಾರಿಯವರಿಂದ ಆತ್ಮಶಕ್ತಿ ದಸರಾ ವಿಶೇಷಾಂಕ ಬಿಡುಗಡೆ

ಮಂಗಳೂರು : ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೆಬಲ್ ಟ್ರಸ್ಟ್ (ರಿ) ಇದರ ಪ್ರಕಾಶಿತ ಆತ್ಮಶಕ್ತಿ ಪತ್ರಿಕೆಯ ದಸರಾ ವಿಶೇಷಾಂಕವನ್ನು ಮಂಗಳೂರು ದಸರಾ ವೇದಿಕೆ (ಕುದ್ರೋಳಿ) ಯಲ್ಲಿ ಮಾಜಿ ಕೇಂದ್ರ ಸಚಿವರಾದ ಬಿ.ಜನಾರ್ದನ ಪೂಜಾರಿ ಯವರು ಬಿಡುಗಡೆ ಗೊಳಿಸಿದರು.


ಆತ್ಮಶಕ್ತಿ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವರಾದ ಬಿ. ಜನಾರ್ದನ ಪೂಜಾರಿಯವರು “ಆತ್ಮಶಕ್ತಿ ಪತ್ರಿಕೆಯ ಪ್ರಾರಂಭಿಕ ಸಂಚಿಕೆಯನ್ನು ಇಪ್ಪತ್ತು ವರ್ಷಗಳ ಹಿಂದೆ ನಾನೇ ಬಿಡುಗಡೆ ಗೊಳಿಸಿದ್ದೆ. ಪತ್ರಿಕೆ ಚೆನ್ನಾಗಿ ಬೆಳೆದು ಬಾಳಲಿ ” ಎಂದು ಹಸನ್ಮುಖಿಯಾಗಿ ಹರಸಿ ಹಾರೈಸಿದರು.
ಈ ಸಂದರ್ಭದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾದ ಜೈ ರಾಜ್ ಸೋಮಸುಂದರಂ, ಟ್ರಸ್ಟಿಯಾದ ಡಾ ಬಿ. ಜಿ ಸುವರ್ಣ, ದೇವೇಂದ್ರ ಪೂಜಾರಿ, ಸಂತೋಷ್ ಜೆ. ಕುಮಾರ್, ದೀಪಕ್ ಜೆ ಪೂಜಾರಿ, ಹರಿಕೃಷ್ಣ ಬಂಟ್ವಾಳ್, ಡಾ ಬಿ. ಜಿ ಸುವರ್ಣ, ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್, ಆತ್ಮಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ವಾಮನ್ ಕೆ, ಉಪಸಂಪಾದಕರಾದ ಮುದ್ದು ಮೂಡುಬೆಳ್ಳೆ, ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷರಾದ ಗೋಪಾಲ್ ಪೂಜಾರಿ, ಟ್ರಸ್ಟ್ ನ ಕಾರ್ಯದರ್ಶಿ ಗೋಪಾಲ್ ಎಮ್, ಮತ್ತಿತರರು ಉಪಸ್ಥಿತರಿದ್ದರು.

Exit mobile version