Site icon Ullalavani

ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕೈರಂಗಳ ಪುಣ್ಯಕೋಟಿನಗರ ಶಾರದಾಗಣಪತಿ ವಿದ್ಯಾಕೇಂದ್ರಕ್ಕೆ ಜಯ

ಮಂಗಳೂರು : ಕೈರಂಗಳ ಪುಣ್ಯಕೋಟಿನಗರ ಶಾರದಾಗಣಪತಿ ವಿದ್ಯಾಕೇಂದ್ರ ಶಾಲೆಯ ವಾಲಿಬಾಲ್‌ ತಂಡವು ನಗರದ ಸಂತ ಆಲೋಶಿಯಸ್‌ ಕಾಲೇಜಿನಲ್ಲಿ ನಡೆದ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಅಂತರಕಾಲೇಜು ವಾಲಿಬಾಲ್‌ ಟೂರ್ನಿಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ.


ಶಾಲೆಯ ಹೆಮ್ಮೆಯ ವಾಲಿಬಾಲ್‌ ತರಬೇತುದಾರರಾದ  ನಿಖಿಲ್‌ ಗಟ್ಟಿ ಅವರ ಮಾರ್ಗದರ್ಶನದಲ್ಲಿ ತಂಡವು  ತರಬೇತು ಪಡೆದು ಅದ್ಭುತ ಕೌಶಲ್ಯವನ್ನು ಪ್ರದರ್ಶಿಸಿ ಚಾಂಪಿಯನ್‌ ಪಡೆದುಕೊಂಡಿದೆ.  ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. 

Exit mobile version