ತೊಕ್ಕೊಟ್ಟು : ಸಹ್ಯಾದ್ರಿ ಕೊ ಆಪರೇಟಿವ್ ಸೊಸೈಟಿ ಲಿಮಿಟೆಡ್ ತೊಕ್ಕೊಟ್ಟು ಸೊಸೈಟಿಯು 2024-25 ರ ಆರ್ಥಿಕ ವರ್ಷದಲ್ಲಿ ರೂಪಾಯಿ 71 ಲಕ್ಷ ಷೇರು ಬಂಡವಾಳ ಹೊಂದಿದ್ದು 2 ಕೋಟಿ 91 ಲಕ್ಷ ಠೇವಣಿಗಳನ್ನು ಸಂಗ್ರಹಿಸಿದೆ ಮತ್ತು 1 ಕೋಟಿ 97 ಲಕ್ಷ ಸಾಲಗಳನ್ನು ನೀಡಿರುತ್ತದೆ ಎಂದು ಸೊಸೈಟಿ ಅಧ್ಯಕ್ಷರಾದ ಕೆ.ಟಿ ಸುವರ್ಣ ಹೇಳಿದರು. ತೊಕ್ಕೊಟ್ಟು ಸಮೃದ್ಧಿ ಸಭಾಂಗಣದಲ್ಲಿ ಜರಗಿದ ಸಹ್ಯಾದ್ರಿ ಕೊ ಆಪರೇಟಿವ್ ಸೊಸೈಟಿ ಲಿಮಿಟೆಡ್ ತೊಕ್ಕೊಟ್ಟು ಉಳ್ಳಾಲ ಮಂಗಳೂರು ಇದರ 2024-25 ರ ಸಾಲಿನ ಪ್ರಥಮ ವರ್ಷದ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಪ್ರಸ್ತುತ ಸಂಘದಲ್ಲಿ 5 ಕೋಟಿ 20 ಲಕ್ಷ ಠೇವಣಿ ಇದ್ದು 4 ಕೋಟಿ 78 ಲಕ್ಷ ಸಾಲವನ್ನು ಸದಸ್ಯರಿಗೆ ನೀಡಲಾಗಿದೆ. ಸೊಸೈಟಿಯು ಮುಂದಿನ ದಿನಗಳಲ್ಲಿ ಹೊಸ ಶಾಖೆಯನ್ನು ಪ್ರಾರಂಭಿಸಲಿದೆ ಮತ್ತು ಈಗಾಗಲೇ ಸೊಸೈಟಿ ಮುಖಾಂತರ 15 ಸ್ವ ಸಹಾಯ ಗುಂಪು ಪ್ರಾರಂಭಗೊಂಡಿದೆ ಇದನ್ನು 50 ಗುಂಪುಗಳಿಗೆ ಏರಿಸುವ ಗುರಿ ಹೊಂದಿದೆ ಎಂದ ಅವರು ಸೊಸೈಟಿಯು ಅಲ್ಪ ಅವಧಿಯಲ್ಲಿ ಉತ್ತಮ ಪ್ರಗತಿಯತ್ತ ಸಾಗುತ್ತಿದ್ದು ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸಲು ಸರ್ವ ಸದಸ್ಯರ ಸಹಕಾರವನ್ನು ಕೋರಿದರು. ಸೊಸೈಟಿಯ ಸದಸ್ಯರು ಹಾಗೂ ಸಲಹೆಗಾರರಾದ ಸತೀಶ್ ಪೂಜಾರಿ ಹಾಗೂ ಲೀಲಾ ರಾಮ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ ಸಹ್ಯಾದ್ರಿ ಕೊ ಆಪರೇಟಿವ್ ಸೊಸೈಟಿಯು 3 ವರ್ಷಗಳಲ್ಲಿ ಸಾಧಿಸಬಹುದಾದ ಪ್ರಗತಿಯನ್ನು 6ತಿಂಗಳ ಕಿರು ಅವಧಿಯಲ್ಲಿ ಸಾಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದರಿ ಸೊಸೈಟಿಯಾಗಿ ಮುನ್ನಡಿಯುತ್ತಿದೆ ಎಂದು ಸೊಸೈಟಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉಪಾಧ್ಯಕ್ಷರಾದ ಎ ಜೆ ಶೇಖರ್, ನಿರ್ದೇಶಕರುಗಳಾದ ಸತೀಶ್ ಕರ್ಕೇರಾ, ಬಾಬು ಶ್ರಿ ಶಾಸ್ತ, ಬಿ ಡಿ ಗೋಪಾಲ್, ದಿನೇಶ್ ಕೆ ಅತ್ತಾವರ, ಆನಂದ ಕೆ ಅಸ್ಸೈಗೋಳಿ, ಶಿವಪ್ರಸಾದ ಪಾಂಡೇಶ್ವರ, ಮಾಧವ ಪೂಜಾರಿ, ಯತೀಶ್ ಹೊಸಗದ್ದೆ , ದಿವ್ಯಾ ನವೀನ್ ಹಾಗೂ ಸೊಸೈಟಿಯ ಸಲಹೆಗಾರರಾದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಂಘಗಳ ನೌಕರರ ಸಹಕಾರಿ ಸಂಘದ ಕಾರ್ಯ ನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಮತ್ತು ಎಸ್ ಸಿ ಡಿ ಸಿ ಸಿ ಬ್ಯಾಂಕಿನ ನಿವೃತ ಡಿ ಜಿ ಎಂ ಲೀಲಾರಾಮ್, ಸೊಸೈಟಿಯ ವ್ಯವಸ್ಥಾಪಕರಾದ ಸುಧೇಶ್ ಎನ್ ಉಚ್ಚಿಲ್ ಉಪಸ್ಥಿತರಿದ್ದರು. ಕಾರ್ಯನಿರ್ವಾಹಣಾ ಅಧಿಕಾರಿ ವಾರ್ಷಿಕ ವರದಿ ಮಂಡಿಸಿದರು ನಿರ್ದೇಶಕರಾದ ಸತೀಶ್ ಕರ್ಕೇರಾ ವಂದಿಸಿದರು.