ಮಂಗಳೂರು : ಕರ್ನಾಟಕ ಸರ್ಕಾರದ ಗಾಣಿಗರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ದ.ಕ. ಜಿಲ್ಲಾ ಗಾಣಿಗರ ಯಾನೆ ಸಪಲಿಗರ ಸಂಘ (ರಿ.), ಅತ್ತಾವರದ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್ ನೇಮಕಗೊಂಡಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ಗಾಣಿಗರ ಚಾವಡಿ (ರಿ.), ಮಂಗಳೂರು ವತಿಯಿಂದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.
“ನಿಮ್ಮ ಅವಧಿಯಲ್ಲಿ ಗಾಣಿಗ ಸಮುದಾಯಕ್ಕೆ ಸರ್ಕಾರದ ವತಿಯಿಂದ ಹಲವಾರು ಅನುದಾನಗಳು ದೊರೆತು, ಸಮಸ್ತ ಗಾಣಿಗ ಸಮುದಾಯದ ಅಭಿವೃದ್ಧಿಯಾಗಲಿ” ಎಂದು ವಿಶ್ವ ಗಾಣಿಗರ ಚಾವಡಿ ಪ್ರಕಟಣೆಯಲ್ಲಿ ಹಾರೈಕೆ ವ್ಯಕ್ತಪಡಿಸಿದೆ.