ಉಳ್ಳಾಲ : ಪ್ರವಾದಿವರ್ಯರ ಮೇಲಿನ ಸ್ನೇಹ ಕೇವಲ ತೋರಿಕೆಗೆ ಮಾತ್ರ ಸೀಮಿತವಾಗದೆ, ಹೃದಯಾಂತರಾಳದಲ್ಲಿ ಇರಬೇಕು. ಆಗ ಮಾತ್ರ ನಾವು ಮಾಡುವ ಎಲ್ಲಾ ಕಾರ್ಯಗಳಲ್ಲೂ ವಿಜಯ ಗಳಿಸಲು ಸಾಧ್ಯ ಎಂದು ಮಂಗಳೂರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಬಾಸಿತ್ ಬಾಅಲವೀ ತಂಙಳ್ ಅಲ್ ಅನ್ಸಾರಿ ಅಭಿಪ್ರಾಯಪಟ್ಟರು.
ಇನೋಳಿ ಜಾಮಿಅಃ ಮುಬಾರಕ್ ಜುಮಾ ಮಸೀದಿ ಅಧೀನದ ಇನೋಳಿ ಬಿ.ಸೈಟ್ ಮಸ್ಜಿದುರ್ರಹ್ಮಾನ್ ಹಾಗೂ ಹಿದಾಯತುಲ್ ಇಸ್ಲಾಂ ಮದ್ರಸಾ ವತಿಯಿಂದ ಭಾನುವಾರ ಮದ್ರಸಾ ವಠಾರದಲ್ಲಿ ನಡೆದ ಸಾಹಿತ್ಯ ಸಂಗಮ, ಬುರ್ದಾ ಬೈತ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಸೀದಿಗಳು ದೊಡ್ಡದಾಗಿ ಇರಬೇಕಿಲ್ಲ, ಸಣ್ಣದಾಗಿದ್ದರೂ ಆ ಊರಿನ ಧಾರ್ಮಿಕತೆಯ ಕೇಂದ್ರ ಆಗಿರುತ್ತದೆ. ಜಾಗ ಸಣ್ಣದಿದ್ದರೂ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುವುದು ಅಗತ್ಯ ಎಂದರು.
ಈ ಸಂದರ್ಭ ಇನೋಳಿ ಬಿ.ಸೈಟ್ ಹಿದಾಯತುಲ್ ಇಸ್ಲಾಂ ಮದ್ರಸಾದ ಸದರ್ ಮುಅಲ್ಲಿಂ ಅಬ್ದುಲ್ ರಹಿಮಾನ್ ಫೈಝಿ ಹಾಗೂ ಮುಅಲ್ಲಿಂ ಮುಹಮ್ಮದ್ ಮುಸ್ಲಿಯಾರ್ ಆಲಡ್ಕ ಇವರನ್ನು ಸನ್ಮಾನಿಸಲಾಯಿತು.
ಇನೋಳಿ ಜಾಮಿಅಃ ಮುಬಾರಕ್ ಜುಮಾ ಮಸೀದಿ ಖತೀಬ್ ಉಸ್ಮಾನ್ ಫೈಝಿ ತೆಕ್ಕಾರ್ ಅಧ್ಯಕ್ಷತೆ ವಹಿಸಿದ್ದರು. ಇನೋಳಿ ಜಾಮಿಅಃ ಮುಬಾರಕ್ ಜುಮಾ ಮಸೀದಿಯ ಅಧ್ಯಕ್ಷ ಟಿ.ಎಚ್.ಅಬ್ಬಾಸ್, ಪ್ರ.ಕಾ. ಮುಹಮ್ಮದ್ ಶಬೀರ್, ಕೋಶಾಧಿಕಾರಿ ಖಾದರ್ ವಗ್ಗ, ಇನೋಳಿ ಎ.ಸೈಟ್ ಮದ್ರಸಾದ ಸದರ್ ಮುಅಲ್ಲಿಂ ಯೂಸುಫ್ ಬಾಖವಿ, ಮುಅಲ್ಲಿಮರಾದ ಕಲಂದರ್ ಶಾಫಿ ನ ಈಮಿ, ಅಬ್ದುಲ್ ರಝಾಕ್ ರಶಾದಿ, ಮಿಸ್ಬಾಹುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಯಾಕೂಬ್ ಐ.ಆರ್., ಪಾವೂರು ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ, ಸದಸ್ಯ ಅನ್ಸಾರ್ ಮುಕ್ರಿ, ಮಸ್ಜಿದುರ್ರಹ್ಮಾನ್ ಅಧ್ಯಕ್ಷ ದಾವೂದ್ ಐ.ಬಿ., ಪ್ರ.ಕಾ. ಎಂ.ಹನೀಫ್, ಸದಸ್ಯರಾದ ಹುಸೈನ್ ದಿಡಿಂಜ, ಇಕ್ಬಾಲ್ ಕಾನ, ಹಮೀದ್ ಬಿ.ಸೈಟ್, ಐ.ಬಿ.ಮುಬಾರಕ್ ಮೊದಲಾದವರು ಉಪಸ್ಥಿತರಿದ್ದರು.
ಮಸ್ಜಿದುರ್ರಹ್ಮಾನ್ ಉಪಾಧ್ಯಕ್ಷ ಹುಸೈನ್ ಬಾವ ಸ್ವಾಗತಿಸಿದರು. ಝಾಕೀರ್ ಅನ್ಸಾರಿ ಕಾರ್ಯಕ್ರಮ ನಿರೂಪಿಸಿದರು.