Site icon Ullalavani

ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ : ಸುಹೈಲ್ ಕಂದಕ್

ಉಳ್ಳಾಲ : ಮೇಕ್ ಎ ಚೇಂಜ್ ಪೌಂಢೇಶನ್ ಇದರ ಆಶ್ರಯದಲ್ಲಿ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಮೆನೇಜ್ ಮೆಂಟ್, ಎನ್ ಎಸ್ ಎಸ್ , ಜನಪ್ರಿಯ ಆಸ್ಪತ್ರೆ, ಎಂಎಫ್ ಸಿ ಗ್ರೂಫ್ ಆಫ್ ಹೋಟೆಲ್ಸ್ ಹಾಗೂ ಎನ್ ಎಸ್ ಯು ಐ ಇವುಗಳ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ ಉಳ್ಳಾಲ ಬೀಚ್‌ನಲ್ಲಿ ನಡೆಯಿತು.


ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮೇಕ್ ಎ ಚೇಂಜ್ ಫೌಂಡೇಶನ್ ಸಂಸ್ಥಾಪಕ ಸುಹೈಲ್ ಕಂದಕ್‌ ಮಾತನಾಡಿ, ಸ್ವಚ್ಛತೆ ಕೇವಲ ಒಂದು ಅಭಿಯಾನವಲ್ಲ, ಇದು ಪ್ರತಿಯೊಬ್ಬರ ಜವಾಬ್ದಾರಿ. ಯುವಕರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ ಎಂದರು.
ಈ ಸ್ವಚ್ಛತಾ ಕಾರ್ಯದಲ್ಲಿ ವಿದ್ಯಾರ್ಥಿಗಳು, ಯುವಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡರು.

Exit mobile version