Site icon Ullalavani

ಭಾವೈಕ್ಯ ಕಹಳೆಯೊಂದಿಗೆ ಮಾದಕತೆ ವಿರುದ್ಧ ಧ್ವನಿಗೂಡಿಸಿದ ಕವಿಗಳು | ಹೊಸ ಅಧ್ಯಾಯ ಬರೆದ ಅಲ್ ಸಲಾಮ

ಉಳ್ಳಾಲ : ಡ್ರಗ್ಸ್ ಮುಕ್ತ ಸಮಾಜದ ವಿರುದ್ಧ ಅಚ್ಚರಿ ಸೇವೆ ನೀಡುತ್ತಿರುವ ದೇರಳಕಟ್ಟೆಯ ಅಲ್ ಸಲಾಮ ಸಭಾಂಗಣದಲ್ಲಿ ಸೆಪ್ಟೆಂಬರ್ 14ರಂದು ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ವತಿಯಿಂದ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ದೇರಳಕಟ್ಟೆಯ ಅಲ್ ಸಲಾಮ ಸಭಾಂಗಣದಲ್ಲಿ ನಡೆಯಿತು.
ಸೌಹಾರ್ದತೆ ಮತ್ತು ಮಾದಕತೆಯ ವಿರುದ್ಧ ಕವಿಗಳು ಚುಟುಕು ಕವನ ವಾಚಿಸಿದರು.


ರಾಜ್ಯದ ವಿವಿಧ ಕಡೆಗಳಿಂದ ಕವಿಗಳು ಭಾಗವಹಿಸಿದ್ದು ಕವಿಗಳಿಗೆ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಶ್ರೀ ವಸಂತ ಜೋಗಿ ಕುಂದಾಪುರ ಕಾರ್ಯಕ್ರಮ ಉದ್ಘಾಟಿಸಿ ಸಮಾಜದಲ್ಲಿ ಇಂತಹಾ ಕಾರ್ಯಕ್ರಮ ನಿರಂತರ ನಡೆಯುತ್ತಲೇ ಇರಬೇಕು ಇದು ಕರಾವಳಿಯ ಪಾಲಿಗೆ ಉತ್ತಮ ಬೆಳವಣಿಗೆ ಎಂದು ಹೇಳಿದರು.
ಹಿರಿಯ ಮುಖಂಡ ಹೈದರ್ ಪೆರ್ತಿಪ್ಪಾಡಿ ಕಾರ್ಯಕ್ರಮದಲ್ಲಿ ಶುಭಹಾರೖಸಿ ಮಾತನಾಡಿದರು. ಅರೋಗ್ಯ ಮತ್ತು ಶೈಕ್ಷಣಿಕ ಸೇವೆಗಾಗಿ ಡಾ.ಯು.ಟಿ ಇಫ್ತಿಖಾರ್ ಅಲಿಯವರಿಗೆ ಶಿಕ್ಷಣ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕವಿಗೋಷ್ಠಿ ಅಧ್ಯಕ್ಷತೆಯನ್ನು ನಾರಾಯಣ ರೈ ಕುಕ್ಕುವಳ್ಳಿ ವಹಿಸಿದ್ದರು. ನಂತರ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಾಧಕರಿಗೆ ನೀಡುವ ಸಮಾಜ ರತ್ನ ಪ್ರಶಸ್ತಿಯನ್ನು ಡಾ ರವಿ ಕಕ್ಕೆಪದವು, ಡಾ ಹರ್ಷ ಕುಮಾರ್ ರೈ, ಅಬ್ದುಲ್ ರಹಿಮಾನ್ ಸಂಕೇಶ್, ಕೆ ಟಿ ರಾಜೇಂದ್ರ ಹೊಳ್ಳ, ಝೖನುಲ್ ಆಬಿದ್ ಲಕ್ಷ್ಮೀಶ್ವರ, ಸಿದ್ದೀಖ್, ರವರಿಗೆ ನೀಡಿ ಗೌರವಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕವಿಗಳಿಗೆ ಪ್ರಶಸ್ತಿಗಳನ್ನು ನೀಡಿ ಶುಭಹಾರೖಸಿದರು. ಭಾವೖಕ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಎಚ್ ಭೀಮರಾವ್ ವಾಷ್ಠರ್ ರವರಿಗೆ ಅಭಿನಂದನಾ ಸನ್ಮಾನ ಮಾಡಲಾಯಿತು.
ಅಲ್ ಸಲಾಮ ಸಂಯೋಜಕ ಶೈಖ್ ಮುಹಮ್ಮದ್ ಇರ್ಫಾನಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಅಬೂಬಕ್ಕರ್ ಅನಿಲಕಟ್ಟೆ ಸ್ವಾಗತಿಸಿ, ಕೆ ಎ ಅಬ್ದುಲ್ ಅಝೀಝ್ ಪುಣಚ ಧನ್ಯವಾದಗೈದರು. ಕಾರ್ಯಕ್ರಮ ರುವಾರಿ ಇಕ್ಬಾಲ್ ಬಾಳಿಲ ಕಾರ್ಯಕ್ರಮ ನಿರೂಪಿಸಿದರು.

Exit mobile version