
ಉಳ್ಳಾಲ: ಶ್ರೀ ರಾಜರಾಜೇಶ್ವರಿ ಸಿದ್ದಿವಿನಾಯಕ ದೇವಸ್ಥಾನ “ಶ್ರೀ ಕ್ಷೇತ್ರ ಕುತ್ತಾರು” ಯಲ್ಲಿ ಈ ವರ್ಷದ ನವರಾತ್ರಿ ಉತ್ಸವವು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ವೈಭವೋಪೇತವಾಗಿ ನಡೆಯಲಿದೆ.
ದೇವಸ್ಥಾನದಲ್ಲಿ ನಡೆಯಲಿರುವ 11 ದಿನಗಳ ಧಾರ್ಮಿಕ ಕಾರ್ಯಕ್ರಮಗಳ ಸೆ.22 ಯೋಗಿನಿ ಪೂಜೆ – ನವರಾತ್ರಿ ಪ್ರಾರಂಭ, ಸೆ. 23 ಆರ್ಯ ಪೂಜೆ, ಸೆ.24 ಭಗವತೀ ಪೂಜೆ, ಸೆ.25 ಕುಮಾರಿ ಪೂಜೆ ,ಸೆ. 26 ಅಂಬಿಕಾ ಪೂಜೆ – ಲಲಿತಾ ಪಂಚಮಿ ಪ್ರಯುಕ್ತ ಸಂಜೆ, ಸೆ.27 ಮಹಿಷಮರ್ದಿನಿ ಪೂಜೆ, ಸೆ.
28 ಚಂಡಿಕಾ ದೇವಿ ಪೂಜೆ, ಸೆ. 29 ಸರಸ್ವತೀ ಪೂಜೆ, ಸೆ.30 ವಾಗೀಶ್ವರೀ ಪೂಜೆ, ಅ.1 ರಂದು ಆಯುಧ ಪೂಜೆ, ಅ.2ರಂದು ವಿಜಯದಶಮಿ – ಬೆಳಿಗ್ಗೆ 7:30ರಿಂದ ಅಕ್ಷರಾಭ್ಯಾಸ ಆರಂಭ, ಸಾರ್ವಜನಿಕ ದುರ್ಗಾ ನಮಸ್ಕಾರ ಪೂಜೆ ಜರಗಲಿದೆ. ಪ್ರತಿದಿನ ಸಂಜೆ 7:30ಕ್ಕೆ ಶ್ರೀ ರಾಜರಾಜೇಶ್ವರಿ ಸಿದ್ದಿವಿನಾಯಕ ದೇವರಿಗೆ ರಂಗಪೂಜೆ ನಡೆಯಲಿದೆ. ಬಳಿಕ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯಿದೆ ಎಂದು ದೇವಸ್ಥಾನ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.