Site icon Ullalavani

ಬಂಟ್ವಾಳ : ದುಬಾರಿ ಬೆಲೆಯ ಸಾಕು ನಾಯಿಯ ಹತ್ಯೆ – ಪೊಲೀಸ್ ಠಾಣೆಯಲ್ಲಿ ದೂರು ದಾಖಲೆ

ಬಂಟ್ವಾಳ : ದುಬಾರಿ ಬೆಲೆಯ ಸಾಕು ನಾಯಿಯನ್ನು ನೆರೆಯ ವ್ಯಕ್ತಿಗಳಿಬ್ಬರು ಬಡಿದು ಕೊಂದು ಹಾಕಿದ್ದಾರೆ ಎಂಬ ಹೊಸದಾದ ದೂರು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕಳ್ಳಿಗೆ ಗ್ರಾಮದ ನೆತ್ತರಕೆರೆ ನಿವಾಸಿ ಡೋಲ್ಪಿ ಡಿ.ಸೋಜ ಎಂಬವರು ದೂರು ನೀಡಿರುವ ವ್ಯಕ್ತಿಯಾಗಿದ್ದಾರೆ. ಅದೇ ಗ್ರಾಮದ ಮತ್ತು ದೂರುದಾರರ ನೆರೆಯವರಾದ ಯತಿನ್ ಪೂಜಾರಿ ಹಾಗೂ ಯಶಿನ್ ಪೂಜಾರಿ ಎಂಬವರು ಬಡಿದು ಕೊಂದಿರುವ ಬಗ್ಗೆ ಇವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.


ದೂರಿನಲ್ಲೇನಿದೆ?
ನಮ್ಮ ಮನೆಯಲ್ಲಿ ನಾವು ಸಾಕುತ್ತಿದ್ದ ಸಾಕು ನಾಯಿ ದಾರಿ ತಪ್ಪಿ ಹೋಗಿದ್ದು ನಮ್ಮ ಮನೆಯ ನೆರೆಯವರಾದ (ಎದ್ರಿದಾರರು) ಮೊನ್ನೆ ದಿನ ಅಂದರೆ ಸೆ. 17 ರಂದು ಬೆಳಿಗ್ಗೆ ಸಾರ್ವಜನಿಕ ಸ್ಥಳದಲ್ಲಿ ನಾಯಿಗೆ “ದೊಣ್ಣೆಯಿಂದ ಬಡಿದು (ಓಡೆದು) ಸಾಯಿಸಿ ಅಲ್ಲಿಯೇ ಗುಂಡಿ ಅಗೆದು ಹೂತು ಹಾಕಿರುತ್ತಾರೆ.” ಇದು ನಮ್ಮ ಗಮನಕ್ಕೆ ಬಾರದೆ ಸೆ. 18ರಂದು ಬೆಳಿಗ್ಗೆ ನಾಯಿಯನ್ನು ಹುಡುಕಿಕೊಂಡು ಹೋದಾಗ ಪಕ್ಕದ ಮನೆಯವರು ನಮಗೆ ಎದ್ರಿದಾರರು ನಾಯಿಯನ್ನು ಒಡೆದು ಸಾಯಿಸಿರುವ ಬಗ್ಗೆ ತಿಳಿಸಿರುತ್ತಾರೆ.
ಇದು ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪರಾಧವಾಗಿದ್ದು, ಈ ಹೇಯ ಕೃತ್ಯದ ಬಗ್ಗೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡಿದ್ದಾರೆ.

Exit mobile version