ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇದರ ವತಿಯಿಂದ ಸೆ.19 ಹಾಗೂ 20 ರಂದು ದಾವಣಗೆರೆ ಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಫುಟ್ಬಾಲ್ (ಪದವಿ ಪೂರ್ವ) ಟೂರ್ನಮೆಂಟ್ ನಲ್ಲಿ ಆಡುವ ಜಿಲ್ಲಾ ತಂಡದಲ್ಲಿ ಉಳ್ಳಾಲದ ಪ್ರತಿಷ್ಠಿತ ಪಾಂಡ್ಯ ರಾಜ್ ಬಲ್ಲಾಳ್ ಪದವಿ ಪೂರ್ವ ಕಾಲೇಜ್ ಇಲ್ಲಿನ ನಾಲ್ಕು ಗ್ರೇಟ್ ಆಟಗಾರರಾದ 1. ಮೊಹಮ್ಮದ್ ಆನಸ್ 2. ಸುಹೈಲ್ ಅಹ್ಮದ್ ಫಾರಿಸ್ 3. ಮೊಹಮ್ಮದ್ ಉನೈನ್ 4.ಅಫ್ನಾನ್ ರೆಹಮಾನ್ ಅಬ್ಬಾಸ್ ಇವರುಗಳು ಸ್ಥಾನ ಪಡೆಯುವ ಮೂಲಕ ಕಾಲೇಜು ಹಾಗೂ ಉಳ್ಳಾಲಕ್ಕೆ ಕೀರ್ತಿ ತಂದಿದ್ದಾರೆ.
ಈ ಆಟಗಾರರು ಕಾಲೇಜು ಕೋಚ್ ತಮೀಮ್ ಉಳ್ಳಾಲ್ ರಿಂದ ತರಬೇತಿ ಪಡೆದಿದ್ದಾರೆ.