Site icon Ullalavani

ಪದವಿ ಪಡೆದುಕೊಂಡವರು ಸಮಾಜಕ್ಕಾಗಿ ದುಡಿಯಬೇಕು : ಕಾಂತಪುರಂ ಎ.ಪಿ. ಉಸ್ತಾದ್

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮಂಜನಾಡಿ : ಪ್ರಪಂಚದಲ್ಲಿಯೇ ಅತಿಶ್ರೇಷ್ಠ ಧರ್ಮವಾದ ಇಸ್ಲಾಂ ಧರ್ಮದಲ್ಲಿರುವ ಆಚರಣೆ, ಆರಾಧನೆಗಳು ಹಾಗೂ ಧರ್ಮದ ಇತರ ಎಲ್ಲ ಕಾರ್ಯಗಳಲ್ಲಿ ಸಮುದಾಯದ ಜನತೆಗೆ ಪೂರ್ಣಪ್ರಮಾಣದ ವಿಶ್ವಾಸ ಮುಖ್ಯ. ಸತ್ಯದ ಹಾದಿಯಲ್ಲಿ ಸಾಗಿದಾಗ ಮಾತ್ರ ಬದುಕು ಸಾರ್ಥಕವಾಗಲು ಸಾಧ್ಯ ಎಂದು ಪ್ರವಾದಿಯವರು ಹೇಳಿದ್ದು ಇಸ್ಲಾಂ ಧರ್ಮ ಅನುಯಾಯಿಗಳಾದ ನಾವು ಅದೇ ಹಾದಿಯಲ್ಲೇ ಸಾಗಬೇಕು ಎಂದು ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟಗಳ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ. ಸುಲಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದರು.

ನರಿಂಗಾನ ಮಂಜನಾಡಿಯ ಅಲ್ ಮದೀನಾ ಇಸ್ಮಾಮಿಕ್ ಕಾಂಪ್ಲೆಕ್ಸ್‍ನಲ್ಲಿ ಭಾನುವಾರ ನಡೆದ ಮೊದಲ `ಅಲ್ ಮರ್‍ಝೂಕಿ’ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಪದವಿ ಪ್ರಭಾಷಣಗೈದು ಪದವಿ ಪಡೆದುಕೊಂಡವರು ಸಮಾಜಕ್ಕೆ ಮಾದರಿಯಾಗಿ, ಸೇವಾ ಮನೋಭಾವನೆಯಿಂದ ಕರ್ತವ್ಯ ರ್ನಿಹಿಸಬೇಕು. ಯಾರನ್ನೂ ದ್ವೇಷಿಸದೆ ಯಾರನ್ನೂ ನಿಂದಿಸದೆ ಧರ್ಮವಿರೋಧಿ ಚಟುವಟಿಕೆಯಲ್ಲಿ ಸಾಗದೇ ಇಸ್ಲಾಂ ಧರ್ಮದ ತತ್ವ ಸಿದ್ಧಾಂತಗಳನ್ನು ಜನತೆಗೆ ಬೋಧಿಸುವ ಹಾದಿಯಲ್ಲಿ ಮುಂದುವರಿಯಬೇಕು ಎಂದು ಕರೆ ನೀಡಿದರು.

ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮಂಜನಾಡಿ ಅಲ್‍ಮದೀನಾ ಇಸ್ಲಾಮಿಕ್ ಕಾಂಪ್ಲೆ ಕ್ಸ್ ಮಹತ್ತರವಾದುದನ್ನು ಸಾ„ಸಿರುವುದರ ಬಗ್ಗೆ ನಮಗೆ ಹೆಮ್ಮೆ ಇದೆ. ಪ್ರಧಾನಿಮಂತ್ರಿಯವರನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ಮುಸ್ಲಿಂ ಸಮಾಜದ ಗಣ್ಯರು, ಧಾರ್ಮಿಕ ಮುಖಂಡರು ಸೇರಿದಂತೆ ಒಟ್ಟು ಭಾರತೀಯ ಮುಸ್ಲಿಮ್ ನೇತಾರರನ್ನು ಹೊಂದಿರುವ 40ಮಂದಿ ಧಾರ್ಮಿಕ ಮತಪಂಡಿತರ ಜೊತೆ ಚರ್ಚಿಸುವ ಅವಕಾಶ ಪಡೆದದ್ದು ತಮ್ಮೆಲ್ಲರ ಆಶೀರ್ವಾದದ ಫಲ. ಸಮಾಜದ ಅಭಿವೃದ್ಧಿ ನಮ್ಮ ಗುರಿ ಆಗಬೇಕು. ಒಬ್ಬ ವ್ಯಕ್ತಿಯ ತಪ್ಪನ್ನು ಹುಡುಕುವುದಕ್ಕಿಂತ ಒಳ್ಳೆಯತನವನ್ನೂ ಗೌರವಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಲ್ ಮದೀನ ಸಂಸ್ಥೆಯ ಅಧ್ಯಕ್ಷ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಮಾತನಾಡಿ ಕೇವಲ 8ವಿದ್ಯಾರ್ಥಿಗಳಿಂದ ಆರಂಭವಾದ ಅಲ್‍ಮದೀನಾ ಸಂಸ್ಥೆ ಕೇವಲ ಅನಾಥ ಮಕ್ಕಳ ಆಶ್ರಯ ತಾಣವಾಗದೆ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸೇವೆಯ ಮೂಲಕ ದೇಶ ವಿದೇಶದಲ್ಲಿ ಖ್ಯಾತಿ ಪಡೆಯುವಂತಹ ಬೃಹತ್ ಸಂಸ್ಥೆಯಾಗಿ ಹೊರಹೊಮ್ಮಲಿದೆ ಎಂದು ಆರಂಭದ ದಿನಗಳಲ್ಲಿ ಉಲ್ಲೇಖಿಸಿದ್ದ ದಿವಂತಗ ಉಳ್ಳಾಲ ತಂಜ್ಞಳ್ ತಾಜುಲ್ ಉಲಮಾ ಅವರ ಮಾತನ್ನು ಸ್ಮರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಆರೋಗ್ಯ ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅಲ್‍ಮದೀನಾ ವಿದ್ಯಾರ್ಥಿಗಳ ಶಿಕ್ಷಣದ ಬೆಳವಣಿಗೆಗೆ ಬಹಳಷ್ಟು ಶ್ರಮ ವಹಿಸಿದೆ. ಅಲ್ ಮದೀನಾ ಮಾಡಿದ ಶ್ರಮದಿಂದಾಗಿ ಈ ಬಾರಿ ಪ್ರಪ್ರಥಮವಾಗಿ ಸನದುದಾನ ನೀಡಲು ಅವಕಾಶ ಸಿಕ್ಕಿದೆ. ಅಲ್ ಮದೀನ ಸಂಸ್ಥೆ ಈ ಹಂತಕ್ಕೆ ಬೆಳೆದಿರುವುದು ಸ್ವಾಗತಾರ್ಹ. ಅದಕ್ಕೆ ಪೂರ್ಣ ಪ್ರಮಾಣದ ಸಹಕಾರ ನೀಡುವುದಾಗಿ ಹೇಳಿದರು.

ಬೃಹತ್ ಒಣಮರವನ್ನು ಆನೆಯೊಂದು ಉರುಳಿಸಲು ಸಾಧ್ಯವಿದ್ದರೂ ಅದನ್ನು ಅದಕ್ಕೆ ತಿನ್ನಲು ಆಗದು. ಆದರೆ ಗೆದ್ದಲುಗಳು ಬೆರಳಿನ್ಲಿ ಹಿಡಿಯಲು ಕಷ್ಟವಿದ್ದರೂ ಬೃಹತ್ ಒಣ ಮರವನ್ನು ತಿನ್ನುತ್ತದೆ. ಎಲ್ಲರ ಬದುಕಿಗೂ ಒಂದು ನೆಲೆ ಕಲ್ಪಿಸಿರುವ ಸೃಷ್ಟಕರ್ತ ಪಂಡಿತರ ಬದುಕಿಗೂ ಒಂದು ನೆಲೆ ಕಲ್ಪಿಸಿರುತ್ತಾನೆ. ಹಾಗಾಗಿ ಪದವಿ ಎಂಬುದು ಕೇವಲ ಉದ್ಯೋಗಕ್ಕಾಗಿ ಅಥವಾ ಹೊಟ್ಟೆ ತುಂಬಿಸುವ ಸಲುವಾಗಿ ಅಲ್ಲ, ಅವಿರತ ಪ್ರಯತ್ನ ನಮ್ಮದು ಫಲಿತಾಂಶ ದೇವರದ್ದು ಎಂಬ ನಿರ್ಧಾರಕ್ಕೆ ಬರಬೇಕು ಎಂದು ಸಂಸ್ಥೆಯ ಉಪಾಧ್ಯಕ್ಷ ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ ಅಭಿಪ್ರಾಯಪಟ್ಟರು.

ಅಲ್ ಮದೀನ ಮುದರ್ರಿಸ್ ಅಬ್ದುಲ್ ರಹ್ಮಾನ್ ಅಹ್ಸನಿ ಅವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಿತು.

ಅಲ್ ಮದೀನ್ ಖತೀಬ್ ಮುಹಮ್ಮದ್ ಕುಂಞ ಅಂಜದಿ ಬುಧಾ ಮಜ್ಲಿಸ್ ಮತ್ತು ಪ್ರಕೀರ್ತನ ವೇದಿಕೆಯ ನೇತೃತ್ವ ವಹಿಸಿದ್ದರು.

ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಉಮರಾ ಸಂಗಮದ ಅಧ್ಯಕ್ಷತೆ ವಹಿಸಿದ್ದರು.

ನಾರ್ತ್ ಕರ್ನಾಟಕ ಹೋಂ ಕಟ್ಟಡವನ್ನು ಯನೆಪೋಯ ವಿವಿ ಕುಲಾ„ಪತಿ ವೈ. ಅಬ್ದುಲ್ಲ ಕುಂಞ ಉದ್ಘಾಟಿಸಿದರು.

ಸಯ್ಯದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಪದವಿ ವಸ್ತ್ರ ವಿತರಣೆ ಮಾಡಿದರು.

ಜಿಲ್ಲಾ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ದುಆ ನೆರವೇರಿಸಿದರು.

ಅಲ್ ಮದೀನ ಸಂಸ್ಥೆಯ ಅಧ್ಯಕ್ಷ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್, ಬೇಕಲ ಇಬ್ರಾಹಿಂ ಮುಸ್ಲಿಯಾರ್, ಅಬ್ದುಲ್ ರಶೀದ್ ಝೈನಿ, ಶೈಖುನಾ ಅಲಿಕುಂಞ ಮುಸ್ಲಿಯಾರ್ ಶಿರಿಯ, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಮುಖ್ಯ ಭಾಷಣ ಮಾಡಿದರು.

ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಅನ್ದುಲ್ ರಶೀದ್ ಝೈನಿ, ಶಾಫಿ ಸಅದಿ, ಅಹ್ಮದ್ ಬಾಖವಿ, ಎಸ್.ಪಿ. ಹಂಝ ಸಖಾಫಿ, ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಚೇರ್‍ಮೆನ್ ಕಣಚೂರು ಮೋನು, ಜಿಲ್ಲಾ„ಕಾರಿ ಎ.ಬಿ. ಇಬ್ರಾಹಿಂ, ಮೂಡಾ ಆಯುಕ್ತ ನಝೀರ್, ಹಾಜಿ ಡಾ. ಎ.ಕೆ. ಮುನೀರ್ ಬಾವಾ, ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್. ಹಂಝ, ಅಬ್ದುಲ್ ಮಜೀದ್ ಹಾಜಿ, ಹಮೀದ್ ಹಾಜಿ ಈಶ್ವರಮಂಗಲ, ಮೊಯ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ, ಅಬೂಸುಫ್ಯಾನ್ ಮದನಿ, ಉಮ್ಮರ್ ಸಖಾಫಿ, ಬಿ.ಎಸ್. ಅಬ್ದುಲ್ ಕುಂಞ ಪೈಝಿ, ಅಲ್ ಅನ್ಸಾರ್ ಪತ್ರಿಕೆಯ ಇಬ್ರಾಹಿಂ ಬಾವಾ ಹಾಜಿ, ಎ.ಎ. ಹೈದರ್ ಪರ್ತಿಪಾಡಿ, ಝೈನುಲ್ ಆಬಿದೀನ್ ತಂಙಳ್, ಮಹಮ್ಮದ್ ಮದನಿ ಸಾಮಣಿಗೆ, ಉಮ್ಮರ್ ಸಖಾಫಿ ಕಲ್ಮಿಂಜ, ಟಿ.ಎ. ಮೊಯ್ಯದ್ದೀನ್ ಸಅದಿ ತೋಟಾಲ್, ಹಮೀದ್ ಸಖಾಫಿ, ಲತೀಫ್ ಸಖಾಫಿ, ಇಲ್ಯಾಸ್ ಅಂಜದಿ, ಕುಂಞ ಬಾವ, ಸಾಧುಕುಂಞ ಮಾಸ್ಟರ್, ಉಸ್ಮಾನ್ ಸಅದಿ ಪಟ್ಟೋರಿ, ಎಸ್. ಅಬ್ದುಲ್ ರಹ್ಮಾನ್ ಇಂಜಿನಿಯರ್, ಹಮೀದ್ ಕಂದಕ್, ಎಸ್.ಕೆ. ಖಾದರ್ ಹಾಜಿ, ವಕ್ಪ್ ಬೋರ್ಡ್‍ನ ಜಿಲ್ಲಾಧ್ಯಕ್ಷ ರಶೀದ್ ಹಾಜಿ, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಎಸ್. ಕರೀಂ,ತಸ್ಲೀಲ್ ಬೆಂಗಳೂರು, ಏಶಿಯನ್ ಬಾವಾ ಹಾಜಿ, ಹಮೀದ್ ಹಾಜಿ ದೇರಳಕಟ್ಟೆ, ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಮಂಜನಾಡಿ ಗ್ರಾಮ ಪಂಚಾಯಿತಿ ಆಧ್ಯಕ್ಷ ಮಹಮ್ಮದ್ ಅಸೈ, ಅಬೂಬಕರ್ ಹಾಜಿ ಸಜಿಪ, ಎನ್ ಎಸ್ ಮಹ್ಮೂದ್, ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು, ಉಮ್ಮರ್ ಕಾಯಾರ್ ಮದೀನ, ಕರೀಂ ಹಾಜಿ ಉಳ್ಳಾಲ, ಟಿ.ಎಸ್. ಇಸ್ಮಾಯಿಲ್, ಮೊಯ್ದಿನ್ ಮಲಾರ್, ಪುತ್ತು ಮೋರ್ಲ, ಎನ್.ಎಸ್. ಹಮೀದ್ ಹಾಜಿ, ತಾಲೂಕು ಪಂಚಾಯಿತಿ ಸದಸ್ಯ ನೆಕ್ಕರೆ ಬಾವ ಮೊದಲಾದವರು ಉಪಸ್ಥಿತರಿದ್ದರು.

ಅಲ್ ಮದೀನಾ ಸಂಸ್ಥೆಯ ಮೆನೇಜರ್ ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು. ಕೆ.ಎಂ. ಕೆ. ಮಂಜನಾಡಿ ಹಾಗೂ ಮುನೀರ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.

Exit mobile version