ಕಣ್ಣೂರು: ಹೆಬ್ಬಾವು ಕೊಂದು ಪದಾರ್ಥ ಮಾಡಿ ತಿಂದ ಇಬ್ಬರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಮಾದಮಂಗಲ ಮುಂಡಕ್ಕೆ ನಿವಾಸಿಗಳಾದ ಯು.ಪ್ರಮೋದ್(40), ಬಿನೀಶ್ (37) ಬಂಧಿತರು. ರಹಸ್ಯ ಮಾಹಿತಿಯನ್ವಯ ಅರಣ್ಯ ಅಧಿಕಾರಿಗಳು ಪ್ರಮೋದ್ ಮನೆಗೆ ದಾಳಿ ನಡೆಸಿದ್ದರು. ಈ ವೇಳೆ ಹೆಬ್ಬಾವು ಪದಾರ್ಥ, ಅದರ ಮೂಳೆಗಳು, ಪಾತ್ರೆಗಳು ಲಭಿಸಿತ್ತು. ಪ್ರಮೋದ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಲಭಿಸಿದ ಮಾಹಿತಿಯಂತೆ ಬಿನೀಶ್ ಸೆರೆಯಾಗಿದ್ದಾನೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಿ ಪಡಿಸಲಾಗಿದ್ದು ರಿಮಾಂಡ್ ವಿಧಿಸಲಾಗಿದೆ.