Site icon Ullalavani

ತೊಕ್ಕೊಟ್ಟು ಭಟ್ನಗರದ ಶ್ರೀ ಶಕ್ತಿಭಾರತ್ ವ್ಯಾಯಾಮ ಶಾಲೆಗೆ ಸುವರ್ಣ ಸಂಭ್ರಮ. ಅ.24, 25, 26 ರಂದು ಗಟ್ಟಿ ಸಮಾಜ ಭವನದಲ್ಲಿ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್-2025

ತೊಕ್ಕೊಟ್ಟು: ಕುಸ್ತಿ, ಪವರ್ ಲಿಫ್ಟಿಂಗ್, ದೇಹರ್ದಾರ್ಢ್ಯ, ಕಬಡ್ಡಿ ಮತ್ತು ಹಗ್ಗಜಗ್ಗಾಟ ಕ್ರೀಡೆಯಲ್ಲಿ ಮುಂಚೂಣಿಯಲ್ಲಿರುವ ತೊಕ್ಕೊಟ್ಟು ಭಟ್ನಗರದ ಶ್ರೀ ಶಕ್ತಿಭಾರತ್ ವ್ಯಾಯಾಮ ಶಾಲೆಗೆ ಸುವರ್ಣ ಸಂಭ್ರಮ, ಆ ಪ್ರಯುಕ್ತ
ದ.ಕ. ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಮಂಗಳೂರು ಮತ್ತು ದ.ಕ. ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಮಂಗಳೂರು ದ.ಕ. ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಪುರುಷರ ಮತ್ತು ಮಹಿಳೆಯರ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್-2025 (CLASSIC & EQUIPPED) (ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಮತ್ತು ಮಾಸ್ಟರ್ಸ್) ಅ.24, 25, 26 ರಂದು ತೊಕ್ಕೊಟ್ಟು ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ಜರಗಲಿದ್ದು, ಇದರ ವಿಜ್ಞಾಪನಾ ಪತ್ರವನ್ನು ಹಿರಿಯ ಮುಖಂಡ ಸೀತಾರಾಮ ಬಂಗೇರ ಬಿಡುಗಡೆಗೊಳಿಸಿದರು.
ಈ ಸ್ಪರ್ಧಾಕೂಟಕ್ಕೆ ರಾಜ್ಯದಿಂದ ಸುಮಾರು 1600 ಕ್ರೀಡಾಪಟುಗಳು ಆಗಮಿಸಲಿದ್ದಾರೆ. ದ.ಕ ಜಿಲ್ಲೆಯ ಉಳ್ಳಾಲದ ರಾಣಿ ಅಬ್ಬಕ್ಕನ ಐತಿಹಾಸಿಕ ಪ್ರದೇಶದಲ್ಲಿ 1976ರಲ್ಲಿ ದಿ. ಶೇಖರ್ ಬಂಗೇರ ಭಟ್ನಗರ ತೊಕ್ಕೊಟ್ಟು ಇವರ ಮಾರ್ಗದರ್ಶನದಲ್ಲಿ ಪ್ರಾರಂಭಗೊಂಡ ಶ್ರೀ ಶಕ್ತಿಭಾರತ್ ವ್ಯಾಯಾಮ ಶಾಲೆ (ಭಟ್ನಗರ) ಉಳ್ಳಾಲಬೈಲ್, ತೊಕ್ಕೊಟ್ಟು ಭಾಗದಲ್ಲಿ ಕುಸ್ತಿ, ಪವರ್ ಲಿಪ್ಟಿಂಗ್, ದೇಹರ್ದಾಡ್ಯ, ಕಬಡ್ಡಿ ಮತ್ತು ಹಗ್ಗಜಗ್ಗಾಟ ಕ್ರೀಡೆಯಲ್ಲಿ ಮುಂಚೂಣಿಯಲ್ಲಿರುವ ಕ್ರೀಡಾ ಸಂಸ್ಥೆಯಾಗಿದೆ. ಸಂಸ್ಥೆಯಲ್ಲಿ ಅನೇಕ ಉತ್ಸಾಹಿ ತರುಣರು ಪವರ್ ಅಫ್ಟಿಂಗ್, ಬೆಂಚ್ ಪ್ರೆಸ್ ಮತ್ತು ದೇಹರ್ದಾಡ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಾ ಕರ್ನಾಟಕ ಕಿಶೋರ್, ಭಾರತ್ ಕಿಶೋರ್ ಮತ್ತು ಪವರ್‌ ಲಿಪ್ಟಿಂಗ್, ಬೆಂಚ್‌ ಪ್ರೆಸ್ ಸ್ಪರ್ಧೆಯಲ್ಲಿ ಬಲಾಢ್ಯ ಪ್ರಶಸ್ತಿಯೊಂದಿಗೆ ತಂಡ ಪ್ರಶಸ್ತಿ ಹಾಗೂ ವೈಯಕ್ತಿಕ ಪದಕ ಪಡೆದುಕೊಂಡವರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಿ ರಾಜ್ಯಕ್ಕೆ ಮತ್ತು ದೇಶಕ್ಕೆ ಕೀರ್ತಿಯನ್ನು ತಂದವರು. ಇಲ್ಲಿನ ಕ್ರೀಡಾಪಟುಗಳು ಹಲವರು ಸರಕಾರಿ ಉದ್ಯೋಗವನ್ನು ಪಡೆದು ಯಶಸ್ವಿ ಜೀವನವನ್ನು ನಡೆಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಪವರ್ ಲಿಫ್ಟಿಂಗ್ ಸಂಸ್ಥೆಯ ಅಧ್ಯಕ್ಷ ಉಮೇಶ್ ಗಟ್ಟಿ, ಕರ್ನಾಟಕ ಪವರ್ ಲಿಫ್ಟಿಂಗ್ ಸಂಸ್ಥೆಯ ಖಜಾಂಜಿ ಜಯರಾಮ , ಅಧ್ಯಕ್ಷರಾದ ಹರೀಶ್ ಬೈಲ್ , ಪೊಲದವರ ಯಾನೆ ಗಟ್ಟಿಯವರ ಸೇವಾ ಸಮಾಜದ ಅಧ್ಯಕ್ಷ ಜನಾರ್ಧನ ಗಟ್ಟಿ ಕನ್ನಿಮನೆ , ರೀಚಲ್ ಸರ್ವಿಸ್‌ ನ ಸಿರಿಲ್ ರಾಬರ್ಟ್ ಡಿಸೋಜ ತೊಕ್ಕೊಟ್ಟು, ಶ್ರೀ ಶಕ್ತಿ ಭಾರತ್ ವ್ಯಾಯಾಮ ಶಾಲೆ ಸರ್ವ ಸದಸ್ಯರು , ಬಾಲಾಂಜನೇಯ ಜಿಮ್ ಮಂಗಳೂರು ಇದರ ಸದಸ್ಯರು ಮತ್ತು ಇವರು ಉಪಸ್ಥಿತರಿದ್ದರು.
ಜಗದೀಶ್ ಸುಲಾಯ ಸ್ವಾಗತಿಸಿದರು. ಪ್ರಧಾನ ಸಂಚಾಲಕರು ಹೇಮಚಂದ್ರ ಬಬ್ಬುಕಟ್ಟೆ ವಂದಿಸಿದರು. ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು ಪ್ರಸ್ತಾವನೆಗೈದರು.

Exit mobile version