ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುಂಪಲ: ಟಿಕೇಟ್ ವಿಚಾರಕ್ಕೆ ಸಂಬಂಧಿಸಿ ಸಿಟಿ ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿರುವ ಘಟನೆ ಕುಂಪಲ ಸಮೀಪ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಗಂಜಿಮಠ ನಿವಾಸಿ ಮಹೇಶ್ (32) ಹಲ್ಲೆಗೊಳಗಾದವರು. ನವೀನ್ ಮತ್ತು ಶಕ್ತಿ ಹಾಗೂ 10 ಮಂದಿಯ ತಂಡ ಬಸ್ಸನ್ನು ತಡೆದು ನಿರ್ವಾಹಕ ಮಹೇಶ್ ಗೆ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ.
ಶುಕ್ರವಾರ ಸಂಜೆ ವೇಳೆ ಸ್ಟೇಟ್ ಬ್ಯಾಂಕ್ ಬಳಿ ಅಶ್ವಿನಿ ಹೆಸರಿನ ಬಸ್ಸನ್ನು ಕುಂಪಲಕ್ಕೆ ಹೋಗುವ ಯುವತಿ ಏರಿದ್ದಳು. ಕುಂಪಲಕ್ಕೆ ಹೋಗಲು ರೂ.10 ಟಿಕೇಟ್ ದರವನ್ನು ನೀಡಿದ್ದಳು. ಆದರೆ ನಿರ್ವಾಹಕ ಮಹೇಶ್ ರೂ.12 ನೀಡುವಂತೆ ಹೇಳಿದ್ದ. ಆದರೆ ಯುವತಿ ಬೇರೆ ಬಸ್ಸಿನಲ್ಲಿ ರೂ.10 ಕೊಡುತ್ತೇವೆ, ಕೊಡುವುದಿಲ್ಲ ಎಂದು ತಿಳಿಸಿ ಬಸ್ಸಿನಿಂದ ಇಳಿದು ಬೇರೆ ಬಸ್ಸಿನಲ್ಲಿ ಪ್ರಯಾಣಿಸಿದ್ದಳು. ಇಂದು ಆಕೆಯೇ ತಂಡವೊಂದನ್ನು ಸೇರಿಸಿಕೊಂಡು ತನಗೆ ಹಲ್ಲೆ ನಡೆಸಿದ್ದಾಳೆ ಎಂದು ಮಹೇಶ್ ಆರೋಪಿಸಿ, ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಹರಕೆ ಹೇಳುವ ಚಟ:
ನಿರ್ವಾಹಕ ಮಹೇಶ್ ಬಸ್ಸಿನಲ್ಲಿ ಪ್ರಯಾಣಿಕರು ಚಿಲ್ಲರೆ ನೀಡದೇ ಇದ್ದಲ್ಲಿ ದೈವ ಕ್ಷೇತ್ರಗಳಿಗೆ ಹರಕೆ ಹಾಕುವ ಅಭ್ಯಾಸವನ್ನು ಇಟ್ಟುಕೊಂಡಿದ್ದನಂತೆ. ಈ ಹಿನ್ನೆಲೆಯಲ್ಲಿ ಹಲವು ಬಾರಿ ಪ್ರಯಾಣಿಕರ ನಡುವೆ ಕಾದಾಟಗಳು ನಡೆದಿತ್ತು ಎಂದು ದಿನನಿತ್ಯ ಅದೇ ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯೋರ್ವರು ತಿಳಿಸಿದ್ದಾರೆ.