Site icon Ullalavani

ಕುತ್ತಾರು ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಮಕ್ಕಳ ಕ್ರೀಡಾಕೂಟಕ್ಕೆ ಚಾಲನೆ

ಕುತ್ತಾರು: ಶ್ರೀ ಕ್ಷೇತ್ರ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಆಶ್ರಯದಲ್ಲಿ ಜರಗಲಿರುವ 39ನೇ ವರ್ಷದ ಸಾರ್ವಜನಿಕ ಕುತ್ತಾರು ಗಣೇಶೋತ್ಸವದ ಪ್ರಯುಕ್ತ ಮಕ್ಕಳಿಗಾಗಿ ಕ್ರೀಡಾಕೂಟ ಸ್ಪರ್ಧೆ ಕ್ಷೇತ್ರದ ವಠಾರದಲ್ಲಿ ಭಾನುವಾರ ನಡೆಯಿತು.
ನಿವೃತ್ತ ಯೋಧ ಪ್ರಸಾದ್ ಕೆ. ಎಸ್, ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಸಂದರ್ಭ ನಮಿತಾ ಪ್ರಸಾದ್, ಸಾರ್ವಜನಿಕ ಕುತ್ತಾರು ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಅತ್ತವರ, ಗೌರವಧ್ಯಕ್ಷ ಚಂದ್ರಹಾಸ ಕೊಟ್ಟಾರಿ, ಉಪಾಧ್ಯಕ್ಷರು ಜಗನ್ನಾಥ್ ಸಾಲಿಯಾನ್, ಪ್ರದಾನ ಕಾರ್ಯದರ್ಶಿ ಪವಿತ್ರ ಕುಮಾರ್ ಗಟ್ಟಿ, ಕಾರ್ಯದರ್ಶಿ ಮಾಧವ ಬಂಗೇರ, ಪ್ರಧಾನ ಅರ್ಚಕ ವಿಜಯ ನಾವಡ, ಜೆ. ಕೆ ರೈ, ವಾಸು ಕೊಟ್ಟಾರಿ, ಕ್ರೀಡಾ ಸಂಚಾಲಕ ಕಿಶೋರ್ ಸಂತೋಷನಗರ, ಸುನೀತಾ ಗಟ್ಟಿ, ಶಶಿಕಲಾ ಗಟ್ಟಿ , ಆಶಾಲತಾ ಕುಶಾಲಪ್ಪ, ಕವಿತಾ ಕುತ್ತಾರು, ವೇದ ಪವಿತ್ರ ಕುಮಾರ್ ಗಟ್ಟಿ, ಸುರೀಶ್ ಗಟ್ಟಿ ಮುಂಡೋಳಿ, ಧನುಷ್ ಗಟ್ಟಿ ಕುತ್ತಾರ್ , ಗೌತಮ್ ಪೂಜಾರಿ, ಅಮರನಾಥ್ ಬಬ್ಬುಕಟ್ಟೆ, ಸುಹಾಸ್ ಗಟ್ಟಿ ಕುತ್ತಾರ್, ತಂಗಮ್ಮ ಪಂಡಿತ್‌ಹೌಸ್, ಅಭಿಷೇಕ್ ಸಾಲ್ಯಾನ್, ರವಿ ಕುಕ್ಕುದಕಟ್ಟೆ. ದೇವಸ್ಥಾನ ಪ್ರಬಂಧಕರು ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.
ಸುರೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Exit mobile version