Site icon Ullalavani

ದೇರಳಕಟ್ಟೆಯ ಮುತ್ತೂಟ್ ಪೈನಾನ್ಸ್ ಬ್ಯಾಂಕ್ ಕಳವು ಯತ್ನ ಪ್ರಕರಣ ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ


ಉಳ್ಳಾಲ: ಮಾ.29 ರಂದು ದೇರಳಕಟ್ಟೆ ಪರಿಸರದಲ್ಲಿರುವ ಹೆಚ್.ಎಮ್ ಕಾಂಪ್ಲೇಕ್ಸ್ ನ ಮುತ್ತೂಟ್ ಪೈನಾನ್ಸ್ ಕಚೇರಿಯಿಂದ ಕಳವಿಗೆ ಯತ್ನಿಸಿ ಪರಾರಿಯಾಗಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವೆಲ್ಲರಿಕುಂಡು ಜಿಲ್ಲೆಯ ಮಂಡಿಯಾನ್‌ ನಿವಾಸಿ ಅಬ್ದುಲ್‌ ಲತೀಫ್‌ ಯಾನೆ ಲತೀಫ್‌ (47) ಬಂಧಿತ.
ಮುತ್ತೂಟ್ ಪೈನಾನ್ಸ್ ಕಚೇರಿಯ ಮುಂದಿನ ಬಾಗಿಲಿನ ಸೈರನ್ ಹೂಟರ್ ನ ಕೇಬಲ್ ಅನ್ನು ತುಂಡು ಮಾಡಿ ಪೈನಾನ್ಸ್ ಕಂಪನಿಯಲ್ಲಿ ಕಳವು ಮಾಡಲು ಮೂವರು ಆರೋಪಿಗಳು ಪ್ರಯತ್ನಿಸಿದ್ದರು. ಪ್ರಕರಣ ಸಂಬಂಧ ಸ್ಥಳೀಯರ ಸಹಕಾರದೊಂದಿಗೆ ಕೊಣಾಜೆ ಪೊಲೀಸರು ಕೇರಳ ಇಡುಕ್ಕಿ ಮೂಲದ ಮುರಳಿ ಮತ್ತು ಕಾಞಂಗಾಡ್ ನ ಆರ್ಷದ್ ಎಂಬವರನ್ನು ಬಂಧಿಸಿದ್ದರು. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮೊ ನಂ: 42/2025 ಕಲಂ: 331[40], 305, 62, 13 BNS ರಂತೆ ಪ್ರಕರಣ ದಾಖಲಾಗಿತ್ತು. ಇದೀಗ ಆರು ತಿಂಗಳುಗಳಿಂದ ನಾಪತ್ತೆಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಈ ಹಿಂದೆ ಕೇರಳದ ರಾಜಧಾನಿ ಜ್ಯುವೆಲ್ಲರಿ ಅಂಗಡಿಯಿಂದ 20 ಕೆಜಿ ಚಿನ್ನ ಹಾಗೂ ಕೇರಳದ ವಿಜಯ ಬ್ಯಾಂಕ್‌ನಿಂದ 15.80 ಕೆಜಿ ಚಿನ್ನ ಹಾಗೂ 2.5 ಲಕ್ಷ ರೂ ನಗದು ಕಳವು ನಡೆಸಿರುವ ಪ್ರಮುಖ ಆರೋಪಿಯಾಗಿದ್ದಾನೆ.

Exit mobile version