Site icon Ullalavani

79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಶೈಕ್ಷಣಿಕ ವರ್ಷದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ತೊಕ್ಕೊಟ್ಟು : 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಶೈಕ್ಷಣಿಕ ವರ್ಷ 2024-2025ರ ಸಾಲಿನಲ್ಲಿ ನಡೆದ SSLC ಪರೀಕ್ಷೆಯಲ್ಲಿ ಕುಮಾರಿ ರೆನಿಶಾ ಸ್ವೀಟಿ ಡಿಸೋಜ ಹಾಗೂ ಕುಮಾರಿ ಆತ್ಮಿಕ ಕೊಟ್ಟಾರಿ, ಪಿಯುಸಿ ಪರೀಕ್ಷೆಯಲ್ಲಿ, ಕುಮಾರಿ ತ್ರಿಷಾ ಕೆ. ಗಟ್ಟಿ ಹಾಗೂ ಕುಮಾರಿ ನೇಹಾ ಗಂಡಿ ಇವರನ್ನು ವಿಜಯ ಮಿತ್ರ ಮಂಡಲ ಮುಡಿಪೋಡಿ ಕಲ್ಲಾಪು ಇದರ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅತಿಥಿಯಾಗಿ ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ರೇಣುಕಾ, ಶಿಕ್ಷಕಿ ವಿನಯ, ಪುರುಷೋತ್ತಮ ಕಲ್ಲಾಪು ಸಮಿತಿಯ ಅಧ್ಯಕ್ಷರಾದ ಕಮಲಾಕ್ಷ ವಿ.ಕೆ, ಗೌರವ ಅಧ್ಯಕ್ಷರಾದ ಸಂಜೀವ ಭಂಡಾರಿ, ಪ್ರಧಾನ ಕಾರ್ಯದರ್ಶಿಯಾದ ಪ್ರಶಾಂತ್ ಕಾಯಂಗಳ, ಕೋಶಾಧಿಕಾರಿಯಾದ ಪುರುಷೋತ್ತಮ ಮೇಲಂಟ, ಉಪಾಧ್ಯಕ್ಷರಾದ ಜಾನ್ ಆಪೋಸ್, ಜೊತೆಕಾರ್ಯದರ್ಶಿಯಾದ ಸಂಜಯ್, ಕ್ರೀಡಾಕಾರ್ಯದರ್ಶಿಯಾದ ಜ್ಞಾನೇಶ್, ಸದಸ್ಯರಾದ, ಗಿರೀಶ್, ಮುಕೇಶ್, ಸಂತೋಷ ಶೆಟ್ಟಿ, ರಾಜೇಶ್, ಯೋಗಿಶ್, ಸದಾನಂದ, ಬಾಲಕೃಷ್ಣ,ಯೋಗಿಶ್ ಆಚಾರ್ಯ, ಭಾವಿತ್, ಲೋಕೇಶ್, ರವೀಂದ್ರ, ಹರೀಶ್ ಕೊಟ್ಟಾರಿ, ಶರತ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Exit mobile version