Site icon Ullalavani

ಅಮೆರಿಕಾದ ಐಟಿ ಕಂಪನಿಯಲ್ಲಿ ಉಳ್ಳಾಲದ ನಮ್ರತಾ ಯು.ಪಿ.ಯವರಿಗೆ  ಪ್ರಮುಖ ನಾಯಕತ್ವ ಹುದ್ದೆ

ಉಳ್ಳಾಲ : ಅಮೆರಿಕಾದ ಬಹುರಾಷ್ಟ್ರೀಯ ಐಟಿ ಕಂಪನಿಯ ಪ್ರಮುಖ ನಾಯಕತ್ವ ಹುದ್ದೆಗೆ ಉಳ್ಳಾಲ ಮೂಲದ ನಮ್ರತಾ ಯು.ಪಿ. ಇವರು ಪದೋನ್ನತಿಗೊಂಡಿದ್ದು, ಇವರು ಸಮಾಜಸೇವಕಿ, ಖ್ಯಾತ ರೇಡಿಯೋ ಜಾಕಿ ಆಗಿರುವ ರಶ್ಮೀ ಉಳ್ಳಾಲ್‌  ಇವರ ಸಹೋದರಿಯಾಗಿದ್ದಾರೆ.


ಉಳ್ಳಾಲ ನಿವಾಸಿ ಯು.ಎ. ಪ್ರೇಮನಾಥ್‌ ಮತ್ತು ಪ್ರಮೀಳಾ ಕುಮಾರಿ ಕೆ. ದಂಪತಿ ಪುತ್ರಿ  ಹಲವು ವರ್ಷಗಳಿಂದ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.  ಸೇವಾ ಅವಧಿಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ನೀಡಿದ ಅಪಾರ ಕೊಡುಗೆ ಹಾಗೂ ಶ್ರೇಷ್ಠತೆಯ ನಿಷ್ಠೆಗಾಗಿ ಈ ಜಾಗತಿಕ ಗೌರವ ದೊರಕಿದೆ. ನಮ್ರತಾ ಇವರು ದಿಡಿನ್ ರವಿ ಕುಮಾರ್ ಅವರ ಪತ್ನಿ ಹಾಗೂ ಖ್ಯಾತ ಸಮಾಜಸೇವಕಿ ರಶ್ಮಿ ಉಳ್ಳಾಲ ಅವರ ಸಹೋದರಿ. ಅವರು ಮೂರು ವರ್ಷದ ಆದ್ಯಾಳ ತಾಯಿ ಕೂಡ ಹೌದು. ಇವರ ಪ್ರೇರಣಾದಾಯಕ ಪಯಣ ಅನೇಕರಿಗೆ ಮಾದರಿಯಾಗಿದ್ದು, ಉಳ್ಳಾಲದ ಕೀರ್ತಿ ಪತಾಕೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

Exit mobile version