ಉಳ್ಳಾಲ: ಮರಗಳನ್ನು ನೆಡುವುದು ಪರಿಸರ ಮತ್ತು ಸಮಾಜಕ್ಕೆ ಬಹಳ ಮುಖ್ಯವಾದ ಕೆಲಸ. ಮರಗಳು ಗಾಳಿಯನ್ನು ಶುದ್ಧೀಕರಿಸುತ್ತವೆ. ಹವಾಮಾನವನ್ನು ನಿಯಂತ್ರಿಸುತ್ತವೆ. ಮಣ್ಣಿನ ಸವೆತವನ್ನು ತಡೆಯುತ್ತವೆ ಮತ್ತು ಪ್ರಾಣಿಗಳಿಗೆ ಅವಾಸಸ್ಥಾನವನ್ನು ಒದಗಿಸುತ್ತವೆ. ಹೆಚ್ಚು ಮರಗಳನ್ನು ನೆಡುವುದರಿಂದ, ಪರಿಸರವನ್ನು ರಕ್ಷಿಸಬಹುದು ಮತ್ತು ಉತ್ತಮ ಭವಿಷ್ಯವನ್ನು ರೂಪಿಸಬಹುದು ಎಂದು ಮಾಜಿ ಶಾಸಕ ಕೆ ಜಯರಾಮ ಶೆಟ್ಟಿ ಹೇಳಿದರು.
ಇತ್ತೀಚೆಗೆ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ದೇರಳಕಟ್ಟೆಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಧಾಟಿಸಿ ಮಾತನಾಡಿದರು.
ಲಯನ್ಸ್ ಅಂತರಾಷ್ಟ್ರೀಯ 317(ಡಿ) ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಮಾಧವ ಉಳ್ಳಾಲ್ ಮಾತನಾಡಿ ಈ ವರ್ಷದಲ್ಲಿ ಸುಮಾರು 20 ಸಾವಿರ ಮರಗಳನ್ನು ನೆಡುವ ಕಾರ್ಯಕ್ರಮಗಳನ್ನು ಲಯನ್ಸ್ ಕ್ಲಬ್ ನಾಲ್ಕು ಜಿಲ್ಲೆಗಳಲ್ಲಿ ಹಮ್ಮಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್, ಡಾ.ಜಿ.ಆರ್ ಶೆಟ್ಟಿ, ಡಾ.ಸಾಯಿಗೀತಾ ಹೆಗ್ಡೆ, ಗೀತಾ ಆರ್ ಶೆಟ್ಟಿ, ಶ್ಯಾಮಲ ಶೆಟ್ಟಿ, ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಉಪಾಧ್ಯಕ್ಷರಾದ ಸದಾನಂದ ಬಂಗೇರ, ಉಪಾಧ್ಯಕ್ಷರಾದ ಯು.ಪಿ.ಆಲಿಯಬ್ಬ, ದೇವಕಿ ಆರ್ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ, ಸಮಿತಿಯ ಪದಾಧಿಕಾರಿಗಳಾದ ಕೆ.ಎಂ.ಕೆ ಮಂಜನಾಡಿ, ಸತೀಶ್ ಭಂಡಾರಿ, ಚಿದಾನಂದ ಎ, ಮಾಧವ ಉಳ್ಳಾಲ್, ಸ್ವರಿತ್, ಶಶಿಕಲಾ ಗಟ್ಟಿ, ಅನುಪಮ ಸಿ ಬಬ್ಬುಕಟ್ಟೆ, ವಾಣಿ ಲೋಕಯ್ಯ, ಮಾಧವಿ ಉಳ್ಳಾಲ್, ವಾಣಿ ಗೌಡ, ಸ್ವಪ್ನಾ ಶೆಟ್ಟಿ, ಆಶಾ ಗಟ್ಟಿ, ಅಮಿತಾ ಆಶ್ವಿನ್, ಶೋಭಾ ವಸಂತ್, ಜಯಶ್ರೀ ಕೆ, ಚಿತ್ರಾ ಜಗನ್, ಮುಂತಾದವರು ಉಪಸ್ಥಿತರಿದ್ದರು.