ಮಂಗಳೂರು : ಇಂದಿನ ಕಾಲದಲ್ಲಿ ರಕ್ಷಾ ಬಂಧನದ ಅರ್ಥ ಇನ್ನೂ ವಿಸ್ತಾರವಾಗಿದೆ. ಕೆಲವರು ತಮ್ಮ ಆಪ್ತ ಸ್ನೇಹಿತರಿಗೆ, ಗುರುಗಳಿಗೆ, ಅಥವಾ ದೇಶವನ್ನು ಕಾಪಾಡುವ ಸೈನಿಕರಿಗೆ ರಾಖಿ ಕಟ್ಟುತ್ತಾರೆ. ಹೀಗೆ, ಈ ಹಬ್ಬವು ಕೇವಲ ಕುಟುಂಬದಷ್ಟೇ ಅಲ್ಲ, ಸಮಾಜದ ಏಕತೆಯ ಸಂಕೇತವೂ ಆಗಿದೆ ಎಂದು ಮಂಗಳೂರು ಮಹಾನಗರ ಸಾಮರಸ್ಯ ಟೋಳಿ ಸದಸ್ಯರಾದ ಪ್ರಸಾದ್ ಕಣ್ಣೂರ್ ಹೇಳಿದರು.
ರಾಜಕೇಸರಿ ಸೇವಾ ಟ್ರಸ್ಟ್ (ರಿ) ಕರ್ನಾಟಕ ಇದರ 567 ನೇ ಸೇವಾ ಯೋಜನೆಯ ಅಂಗವಾಗಿ ಜೆಪ್ಪು ಮಾರ್ಕೆಟ್ ಬಳಿ ಇರುವ ಭಗಿನಿ ಸಮಾಜದಲ್ಲಿ ಭಗಿನಿ ಸಮಾಜದ ಸಹೋದರಿಯರೊಂದಿಗೆ “ರಕ್ಷಾಬಂಧನ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಭಗಿನಿ ಸಮಾಜದ ಅಧ್ಯಕ್ಷರಾದ ರತ್ನಾ.ಟಿ.ಆಳ್ವ ಮಾತನಾಡಿ, ರಕ್ಷಾ ಬಂಧನದ ಆಚರಣೆಯಿಂದ ಸಹೋದರತ್ವ, ಸಾಮರಸ್ಯ ಮತ್ತು ಸ್ವಾಭಿಮಾನದ ಸಂಕೇತವನ್ನು ಪ್ರತಿಬಿಂಬಿಸಿದಂತೆ ಆಗುವುದು ಎಂದರು.
ಸಂಸ್ಥಾಪಕರಾದ ದೀಪಕ್ .ಜಿ. ಬೆಳ್ತಂಗಡಿ ಅಧ್ಯಕ್ಷತೆ ವಹಿಸಿದ್ದರು. ಭಗಿನಿ ಸಮಾಜದ ಉಪಾಧ್ಯಕ್ಷ ಚಿತ್ರಾ ಪ್ರಭು, ಸಾಮಾಜಿಕ ಸೇವಾಕರ್ತೆ ಶಬರಿ ನಿತಿನ್ ಶೆಟ್ಟಿ, ಸಂಸ್ಥೆಯ ಜಿಲ್ಲಾ ಸಂಚಾಲಕರಾದ ಪ್ರಸಾದ್ ಕುಲಾಲ್ ಮತ್ತು ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಸತೀಶ್ ಕಂಗಿತ್ತಿಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಲಾಲ್ ಮಂಗಳಾದೇವಿ ಸ್ವಾಗತಿಸಿದರು. ಸಂಸ್ಥೆಯ ಸಹ ಸಂಘಟನಾ ಕಾರ್ಯದರ್ಶಿ ವರುಣ್ ಕುಮಾರ್ ಬಪ್ಪನಾಡು ನಿರೂಪಿಸಿದರು. ಸಂಸ್ಥೆಯ ಜಿಲ್ಲಾಧ್ಯಕ್ಷರಾದ ಸಂತೋಷ್ ಕೊಲ್ಯ ಪ್ರಸ್ತಾವನೆಗೈದರು. ಕೋಶಾಧಿಕಾರಿ ಪ್ರವೀಣ್ ಕುಲಾಲ್ ವಂದಿಸಿದರು. ನೆರೆದವರೆಲ್ಲರೂ ಪರಸ್ಪರ ರಕ್ಷೆಯನ್ನು ಕಟ್ಟುವ ಮೂಲಕ ಸಂಭ್ರಮಿಸಿದರು.