Site icon Ullalavani

ಸೋಮೇಶ್ವರ ರೆಸಾರ್ಟ್ ನಲ್ಲಿ ಆತ್ಮಹತ್ಯೆ


ಸೋಮೇಶ್ವರ : ಇಲ್ಲಿನ ರೆಸಾರ್ಟ್ ನಿರ್ವಹಣೆ ವ್ಯಕ್ತಿ ರೆಸಾರ್ಟ್ ನಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮೇಶ್ವರದ ಮುಡಾ ಬಡವಾಣೆಯಲ್ಲಿ ನಿನ್ನೆ ಮಧ್ಯಾಹ್ನ ವೇಳೆ ಬೆಳಕಿಗೆ ಬಂದಿದೆ.
ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ವಸಂತ್ ಸುವರ್ಣ(54)ಆತ್ಮ‌ ಹತ್ಯೆಗೈದ ದುರ್ದೈವಿ. ಮೃತ ವಸಂತ್ ಅವರು ಪತ್ನಿಯೊಂದಿಗೆ ಸೋಮೇಶ್ವರದ ಮೂಡ ಬಡಾವಣೆಯ ಖಾಸಗಿ ರೆಸಾರ್ಟ್ ವೊಂದರ ನಿರ್ವಹಣೆ ನಡೆಸುತ್ತಿದ್ದರು.ವಸಂತ್ ದಂಪತಿಗೆ ಮಕ್ಕಳಿರಲಿಲ್ಲ.ಇಂದು ಮಧ್ಯಾಹ್ನ ವಸಂತ್ ಅವರು ತಾನು ನಿರ್ವಹಣೆ ನಡೆಸುತ್ತಿದ್ದ ಮೂಡದ ರೆಸಾರ್ಟ್ ನೊಳಗಿನ ಸಣ್ಣ ಮನೆಯೊಳಗಿನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಉಳ್ಳಾಲ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version