
ಮುಡಿಪು: ಕೈರಂಗಳ ಪುಣ್ಯಕೋಟಿನಗರದ ಅಮೃತಧಾರ ಗೋಶಾಲೆಯ ಮೇಲ್ಛಾವಣಿ ಭಾರೀ ಗಾಳಿ ಮಳೆಯ ಹೊಡೆತಕ್ಕೆ ಮಗುಚಿಬಿದ್ದಿದ್ದು, ಅದೃಷ್ಠವಶಾತ್ ಯಾವುದೇ ಗೋವುಗಳಿಗೆ ಪ್ರಾಣಾಪಾಯ ಸಂಭವಿಸಿಲ್ಲ.
ಇದೀಗ ತಾತ್ಕಾಲಿಕ ಕಟ್ಟಡದಲ್ಲಿ ಗೋಶಾಲೆ ಕರ‍್ಯಾಚರಿಸುತ್ತಿದ್ದು, ದುರಸ್ತಿ ಕಾರ್ಯಕ್ಕೆ ರೂ.4 ಲಕ್ಷಕ್ಕೂ ಅಧಿಕ ಮೊತ್ತ ತಗಲುವುದರಿಂದ ಗೋಪ್ರೇಮಿಗಳು ಸಹಕರಿಸುವಂತೆ ಅಮೃತಧಾರಾ ಗೋಶಾಲಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಸಾಮಾಜಿಕ ಜಾಲತಾಣಗಳ ಮೂಲಕ ವಿನಂತಿಸಿದ್ದಾರೆ. ಜು. 26 ರಂದು ಭಾರೀ ಗಾಳಿ ಮಳೆಯ ಹೊಡೆತಕ್ಕೆ ಮರ ಗೋಶಾಲೆ ಮೇಲೆ ಬಿದ್ದು, ಗೋಶಾಲೆ ಸಂಪೂರ್ಣ ಕುಸಿದುಬಿದ್ದಿತ್ತು. ಇದೀಗ ತಾತ್ಕಾಲಿಕವಾಗಿ ಕಟ್ಟಿದ ಶೆಡ್ ನಲ್ಲಿ ಗೋವುಗಳನ್ನು ಸಲಹಲಾಗುತ್ತಿದ್ದು, ಶಾಶ್ವತ ಕಟ್ಟಡಕ್ಕೆ ಗೋಪ್ರೇಮಿಗಳು ಮುಂದೆ ಬರಬೇಕಿದೆ.