Site icon Ullalavani

ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಓಪನ್ ಡೇ 2025 ಸಮಾರಂಭ


ಬೆಂಗಳೂರು: ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ  ವಾರ್ಷಿಕ ಓಪನ್ ಡೇ ಕಾರ್ಯಕ್ರಮ ಜರಗಿತು.
1,300ಕ್ಕೂ ಹೆಚ್ಚು ಭೇಟಿಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಉದ್ಘಾಟನಾ ಸಮಾರಂಭದಲ್ಲಿ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಕುಲಪತಿಗಳಾದ ರೆ. ಫಾದರ್ ಡಾ. ವಿಕ್ಟರ್ ಲೋಬೊ ಎಸ್.ಜೆ. , ರಾಜೀವ್ ಗಾಂಧಿ ಜೈವಿಕತಂತ್ರಜ್ಞಾನ ಕೇಂದ್ರದ ನಿರ್ದೇಶಕ ಡಾ. ಚಂದ್ರಭಾಸ್ ನಾರಾಯಣ ಮತ್ತು  ಕಾರ್ಯಕ್ರಮ ಸಂಯೋಜಕ ಡಾ. ವಿ. ಕ್ರಿಸ್ಟೋ ಸೆಲ್ವನ್ ಅತಿಥಿಗಳಾಗಿ ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ 180ಕ್ಕೂ ಹೆಚ್ಚು ಪ್ರದರ್ಶನಗಳು ನಡೆದಿದ್ದು, ವಿಜ್ಞಾನ ವಿಭಾಗದ ಕ್ಯಾನ್ಸರ್ ಸಂಶೋಧನೆ, ಬಯೋಪ್ಲಾಸ್ಟಿಕ್ ತಯಾರಿಕೆ, ವಾಣಿಜ್ಯ ವಿಭಾಗದ ಸೆಗ್ರೆಬಾಟ್ ಯೋಜನೆ, ಇತಿಹಾಸ ವಿಭಾಗದ ವಿಜಯನಗರ ಸಾಮ್ರಾಜ್ಯದ ಮಾದರಿ ಮತ್ತು ಮಾಧ್ಯಮ ವಿಭಾಗದ ಸೃಜನಾತ್ಮಕ ಪ್ರದರ್ಶನಗಳು ಪ್ರಮುಖ ಆಕರ್ಷಣೆಗಳಾಗಿದ್ದವು.
ಈ ಸಂದರ್ಭ “ಶೈಕ್ಷಣಿಕ ಸೇತುವೆಗಳ ನಿರ್ಮಾಣ” ಎಂಬ ವಿಶೇಷ ಸಭೆಯಲ್ಲಿ ಡಿಪಿಎಸ್ ಈಸ್ಟ್ ನ ಪ್ರಾಂಶುಪಾಲೆ  ಮನಿಲಾ ಕಾರ್ವಾಲ್ಕೋ ಸೇರಿದಂತೆ ಅನೇಕ ಶಿಕ್ಷಣತಜ್ಞರು ಭಾಗವಹಿಸಿದ್ದರು.


ವಿದ್ಯಾರ್ಥಿ ಸಂಸದೀಯ ಸಭೆ 2025 ರಾಜಕೀಯ ಪ್ರಜ್ಞೆಯನ್ನು ಬೆಳೆಸುವಲ್ಲಿ ಸಹಾಯಕವಾಗಿತ್ತು. ಪೋಷಕರಿಗಾಗಿ “ಉನ್ನತ ಶಿಕ್ಷಣ – ಬದಲಾಗುವ ಅವಕಾಶಗಳು ಮತ್ತು ಆಯ್ಕೆಗಳು” ವಿಶೇಷ ಸೆಷನ್ ನಡೆದಿತ್ತು.   ದೆಹಲಿ ಪಬ್ಲಿಕ್ ಸ್ಕೂಲ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಸ್ಕೂಲ್ ಆಫ್ ಇಂಡಿಯಾ ಪ್ರಶಸ್ತಿಗಳನ್ನು ಪಡೆದುಕೊಂಡರು. ಸಂವಹನ ಮತ್ತು ಮಾಧ್ಯಮ ಅಧ್ಯಯನ  ವಿಶ್ವವಿದ್ಯಾಲಯದ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಘೋಷಿಸಲಾಯಿತು.

Exit mobile version