Site icon Ullalavani

ಮಂಗಳೂರು ವಿಶ್ವದ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ  49ನೇ ಸ್ಥಾನ, ಭಾರತದಲ್ಲಿ ಮೊದಲ ಸ್ಥಾನ

ಮಂಗಳೂರು: ಕರಾವಳಿ ನಗರ ಮಂಗಳೂರಿಗೆ ಮತ್ತೊಂದು ಗೌರವ ಸಿಕ್ಕಿದೆ. ವಿಶ್ವದ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮಂಗಳೂರು 49ನೇ ಸ್ಥಾನ ಪಡೆದು, ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ.

ಈ ಮಾನ್ಯತೆ ‘ನಂಬಿಯೋ’ (Numbeo) ಎಂಬ ಸ್ವತಂತ್ರ ಜಾಗತಿಕ ಡೇಟಾಬೇಸ್ ಸಂಸ್ಥೆಯು 2025ರ ಮಧ್ಯವರ್ಷದ ಮಾಹಿತಿಯನ್ನು ಆಧರಿಸಿ ನೀಡಿದೆ.

ವಿಶ್ವದಾದ್ಯಾಂತ 393 ನಗರಗಳನ್ನು ಒಳಗೊಂಡ ಈ ಪಟ್ಟಿಯಲ್ಲಿ ಭಾರತದಿಂದ 23 ನಗರಗಳು ಸೇರಿಕೊಂಡಿವೆ.

ಇವುಗಳ ಪೈಕಿ ಮಂಗಳೂರು 74.2 ಅಂಕಗಳ ಸುರಕ್ಷತಾ ಸೂಚ್ಯಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ವಡೋದರಾ (85ನೇ) ಮತ್ತು ಅಹ್ಮದಾಬಾದ್ (93ನೇ) ಸ್ಥಾನದಲ್ಲಿವೆ.

ಮಂಗಳೂರಿನ ಈ ಸಾಧನೆ ನಗರ ನಿವಾಸಿಗಳ ಜೊತೆಗೆ ದೇಶದ ಜನತೆಗೂ ಹೆಮ್ಮೆ ತಂದಿದೆ.

Exit mobile version