Site icon Ullalavani

ಸರ್ಕಾರಿ ಪ್ರೌಢಶಾಲೆ ಕಲ್ಲರಕೋಡಿ ಇಲ್ಲಿ ಆಟಿಡೊಂಜಿ ದಿನ

ನರಿಂಗಾನ: ಸರ್ಕಾರಿ ಪ್ರೌಢಶಾಲೆ ಕಲ್ಲರಕೋಡಿ ಇಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ನರಿಂಗಾನ ಗ್ರಾಮಪಂಚಾಯತ್ ಅಧ್ಯಕ್ಷರಾದ ನವಾಝ್ ಎಂ.ಬಿ ತೆಂಗಿನ ಸಿರಿ ಅರಳಿಸಿ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಶಿಕ್ಷಕಿ ನಯನ ಕುಮಾರಿ.ಕೆ ಅವರು ವಹಿಸಿಕೊಂಡಿದ್ದರು.
ವೇದಿಕೆಯಲ್ಲಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಝಾಕ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ಅಬೂಬಕ್ಕರ್, ಪ್ರಾ ಥಮಿಕ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯನಿ ಸುಜಾತ ಅವರು ಉಪಸ್ಥಿತರಿದ್ದರು.
ಶಾಲಾ ವಿಜ್ಞಾನ ಶಿಕ್ಷಕಿ ವಿನಿತಾ ಮೇಡಂ ಅವರು ಆಷಾಢ ತಿಂಗಳಲ್ಲಿ ಹಿರಿಯರು ಪಟ್ಟ ಕಷ್ಟ, ರೋಗ ರುಜಿನ ದೂರ ಗೊಳಿಸುವ ಆಟಿ ಕಳೆಂಜನ ಬಗ್ಗೆ, ಆಷಾಢ ಅಮಾವಾಸ್ಯೆಯ ದಿನ ಕುಡಿಯುವ ಹಾಳೆಮರದ ತೊಗಟೆಯಿಂದ ತಯಾರಿಸುವ ಕಷಾಯದ ಬಗ್ಗೆ ಮಾಹಿತಿ ನೀಡಿದರು.
ಹಿರಿಯ ಶಿಕ್ಷಕಿ ಸೀಮಾ ಮರಿಯಾ ಡಿಸೋಜ ಸ್ವಾಗತಿಸಿದರು, ಕನ್ನಡ ಭಾಷಾ ಶಿಕ್ಷಕಿ ಜಯಲಕ್ಷಿ÷್ಮÃ ವಂದಿಸಿದರು.
ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ ಜೋಗಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಮಕ್ಕಳು ತಮ್ಮ ಹೆತ್ತವರ ಸಹಕಾರದೊಂದಿಗೆ ತಯಾರಿಸಿದ 47 ಖಾದ್ಯಗಳನ್ನು ವೇದಿಕೆಯಲ್ಲಿ ಜೋಡಿಸಿ ಇಟ್ಟು, ಖಾದ್ಯಗಳ ಮಹತ್ವ, ತಯಾರಿಸಲು ಬೇಕಾದ ಸಾಮಾಗ್ರಿಗಳ ಮಾಹಿತಿ ನೀಡಲಾಯಿತು.

Exit mobile version