Site icon Ullalavani

ಶ್ರೀ ವಿಷ್ಣುಮೂರ್ತಿ ಜನಾರ್ದನ ಯಕ್ಷಗಾನ ಅಧ್ಯಯನ ಟ್ರಸ್ಟ್ 20 ವರ್ಷಾಚರಣೆ ಪ್ರಯುಕ್ತ ಸರಣಿ ಕಾರ್ಯಕ್ರಮ, ರಸಪ್ರಶ್ನೆಯಲ್ಲಿ ಅಸ್ಸಿಸಿ ಪ್ರೌಢಶಾಲೆ ಪ್ರಥಮ

ಕುತ್ತಾರು : ಶ್ರೀ ವಿಷ್ಣುಮೂರ್ತಿ ಜನಾರ್ದನ ಯಕ್ಷಗಾನ ಅಧ್ಯಯನ ಟ್ರಸ್ಟ್ ಮಂಜನಾಡಿ ಇದರ 20ನೇ ವರ್ಷಾಚರಣೆ ಅಂಗವಾಗಿ ಸರಣಿ ಕಾರ್ಯಕ್ರಮದ ಪ್ರಯುಕ್ತ 9ನೇ ಕಾರ್ಯಕ್ರಮವು ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಶೃತಿಲಯ ಕಲಾ ಕೇಂದ್ರದ ಸಹಯೋಗದಿಂದ ಜರಗಿತು.
ಶೃತಿಲಯ ಕಲಾ ಕೇಂದ್ರದ ಸಂಚಾಲಕರಾದ ಹರೀಶ್ ಮಾಸ್ಟರ್, ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷೆ ಮಾಧವಿ ಉಳ್ಳಾಲ, ಯಕ್ಷಗಾನ ಅಧ್ಯಯನ ಟ್ರಸ್ಟ್ ನ ನಿರ್ದೇಶಕರಾದ ಜಗದೀಶ್ ಎಸ್ ಗಟ್ಟಿ ಉಚ್ಚಿಲ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಕೃಷ್ಣಪ್ಪ ಕೀನ್ಯಾ, ಸಮರ್ಪಣಾ ಪರಿವಾರ ಟ್ರಸ್ಟ್ ರಿಜಿಸ್ಟರ್ಡ್ ಮಂಗಳೂರು ಇದರ ರಾಮಚಂದ್ರ ಆಚಾರ್ಯ ದೇರ್ಲಕಟ್ಟೆ, ಜೀವನ್ ಕೆಎಸ್ ಮಾಡೂರು, ಮೋಹನ್ ಶಿರ್ಲಾಲ್, ವಸಂತ ಕೋಡಿ, ಶ್ರೀ ವಿಷ್ಣುಮೂರ್ತಿ ಜನಾರ್ಧನ ಭಜನಾ ಮಂಡಳಿಯ ಕಾರ್ಯದರ್ಶಿ ಪುರಂದರ ಅಸೈ, ಟ್ರಸ್ಟಿನ ಅಧ್ಯಕ್ಷ ಹರೀಶ್ ಭಟ್ಯಡ್ಕ, ಅಧ್ಯಯನ ಟ್ರಸ್ಟಿನ ಸಾಂಸ್ಕöÈತಿಕ ಕಾರ್ಯದರ್ಶಿ ಉದಯ ಅಂಚನ್ ಮಂಜನಾಡಿ ಹಾಗೂ ಅಂಗನವಾಡಿ ಶಿಕ್ಷಕಿ ಸುಜಾತ ಕಲ್ಕಟ್ಟ ಉಪಸ್ಥಿತರಿದ್ದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಅಸ್ಸಿಸಿ ಪ್ರೌಢಶಾಲೆ ಹಾಗೂ ದ್ವಿತೀಯ ಆನಂದಾಶ್ರಮ ಪ್ರೌಢಶಾಲೆ ಪಡೆದುಕೊಂಡಿದ್ದು ತೃತೀಯ ಹಾಗೂ ಚತುರ್ಥ ಬಹುಮಾನವನ್ನು ಕೆಪಿಎಸ್ ಮೊಂಟೆಪದವು ಹಾಗೂ ವಿದ್ಯಾರತ್ನ ಪ್ರೌಢಶಾಲೆ ದೇರಳಕಟ್ಟೆ ಪಡಕೊಂಡಿತು.
ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಸುಕೇಶ್ ಮಂಜನಾಡಿ ನಿರೂಪಿಸಿ, ವಿಜೇತ್ ಎಂ ಶೆಟ್ಟಿ ಮಂಜನಾಡಿ ವಂದಿಸಿದರು

Exit mobile version