
ಕಾಪಿಕಾಡು: ತುಳುನಾಡಿನಲ್ಲಿ ಆಟಿ ತಿಂಗಳ ಕಾರ್ಯಕ್ರಮ ವನ್ನು ಸಂಘ ಸಂಸ್ಥೆಗಳು ಎಲ್ಲರನ್ನೂ ಒಟ್ಟು ಸೇರಿಸಿ ಆಚರಿಸುವುದರ ಜತೆಗೆ ಯುವ ಪೀಳಿಗೆಗೆ ತುಳುವ ಸಂಸ್ಕöÈತಿಗಳನ್ನು ತಿಳಿಸುವ ಕಾರ್ಯ ಆಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ತೊಕ್ಕೊಟ್ಟು ಬ್ರಹ್ಮಶ್ರೀ ಬಿಲ್ಲವ ವೇದಿಕೆ ಮತ್ತು ಮಹಿಳಾ ವೇದಿಕೆ ಇದರ ವತಿಯಿಂದ ಕಾಪಿಕಾಡು ಖಾಸಗಿ ಸಭಾಂಗಣದಲ್ಲಿ ನಡೆದ ಬಿರುವೆರ್ನ ಆಟಿದ ಕೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷರಾದ ಕೆ.ಟಿ.ಸುವರ್ಣ ವಹಿಸಿದ್ದರು. ಕಾರ್ಯಾಧ್ಯಕ್ಷರಾದ ಸತೀಶ್ ಕರ್ಕೇರ, ಗೌರವ ಸಲಹೆಗಾರರಾದ ಎ.ಜೆ.ಶೇಖರ್, ದಿನೇಶ್ ಕೆ.ಅತ್ತಾವರ, ಚಂದ್ರಶೇಖರ ಉಚ್ಚಿಲ, ಮಾಧವ ಪೂಜಾರಿ,ಪ್ರಧಾನ ಕಾರ್ಯದರ್ಶಿ ಆನಂದ ಕೆ.ಅಸೈಗೋಳಿ, ಕೋಶಾಧಿಕಾರಿ ಲಕ್ಷ÷್ಮಣ ಪೂಜಾರಿ, ಮಹಿಳಾ ವೇದಿಕೆ ಗೌರವಧ್ಯಕ್ಷರಾದ ಯೋಗಿನಿ ಕೆ.ಟಿ.ಸುವರ್ಣ, ಅಧ್ಯಕ್ಷರಾದ ಗಂಗಾ ಆನಂದ, ವೇದಿಕೆಯ ಪ್ರಮುಖರಾದ ಹರೀಶ್ ಅಂಬ್ಲಮೊಗರು, ರಾಜೇಶ್ ಕೆರೆಬೈಲು, ಭಗವಾನ್ ದಾಸ್, ಜಗದೀಶ್ ಕೆರೆಬೈಲು, ಗೋಪಿನಾಥ್ ಬಗಂಬಿಲ, ರಾಜೀವ ಮಾಸ್ಟರ್, ರಾಕೇಶ್ ಕುಮಾರ್, ಉದಯ ಆರ್.ಕೆ, ಮೋಹನ್ ಸಾಲ್ಯಾನ್, ರಾಜೇಶ್ ಪಿಲಾರು, ಪ್ರವೀಣ್ ನೆರಿಯ, ಮಹಿಳಾ ವೇದಿಕೆಯ ಉಪಾಧ್ಯಕ್ಷ ರಾದ ಜಯಶ್ರೀ ದಿನೇಶ್, ಪ್ರಧಾನ ಕಾರ್ಯದರ್ಶಿ ಸುರೇಖಾ ಹರೀಶ್, ಕೋಶಾಧಿಕಾರಿ ಶಮ್ಮಿ ಸುವರ್ಣ, ಪ್ರಮುಖರಾದ ವನಿತಾ ಚಂದ್ರಶೇಖರ, ಸತ್ಯವತಿ, ವಿಜಯ, ಸುನೀತಾ, ಹರಿಣಾಕ್ಷಿ, ಶರ್ಮಿಳಾ, ಸರಿತಾ ಜೀವನ್, ವೈಶಾಲಿ ರಾಜೇಶ್ ಇತರರು ಉಪಸ್ಥಿತರಿದ್ದರು. ವೇದಿಕೆಯ ಉಪಾಧ್ಯಕ್ಷ ರಾದ ಹರೀಶ್ ಮುಂಡೋಳಿ ಮತ್ತು ದತ್ತು ಸಂಚಾಲಕರಾದ ಜೀವನ್ ಕುಮಾರ್ ತೊಕ್ಕೊಟು ಕಾರ್ಯಕ್ರಮ ನಿರ್ವಹಿಸಿದರು. ಕು.ಶ್ರೀರಕ್ಷಾ ಪ್ರಾರ್ಥನೆಗೈದರು.
ಮಹಿಳಾ ವೇದಿಕೆಯ ಸದಸ್ಯರಿಂದ ತುಳುನಾಡಿನ ವಿಶೇಷತೆ ಬಗ್ಗೆ ನೃತ್ಯರೂಪಕ, ವೇದಿಕೆಯ ಸದಸ್ಯರಿಂದ ಹಾಸ್ಯ ಪ್ರಹಸನ, ಸಂಗೀತ ಕಾರ್ಯಕ್ರಮ ಮೂಲಕ ಜನಮನ ರಂಜಿಸಿದರು. ಆಟಿ ತಿಂಗಳ ವಿಶೇಷ ಆಹಾರ, ತಿಂಡಿ ಗಳನ್ನು ಸದಸ್ಯರು ಮನೆಯಲ್ಲಿ ಸಿದ್ದಪಡಿಸಿ ಬಳಿಕ ಸಹ ಭೋಜನ ನಡೆಯಿತು.
