Site icon Ullalavani

ಬೆಂಗಳೂರಿಗೆ ಕೆಲಸಕ್ಕೆಂದು ತೆರಳಿದ ಇನೋಳಿ ನಿವಾಸಿ ವಿವಾಹಿತ ನಾಪತ್ತೆ

ಇನೋಳಿ: ಬೆಂಗಳೂರಿಗೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ತೆರಳಿದ ಇನೋಳಿ ಪಾವೂರು ಕೆಳಗಿನಕೆರೆ ನಿವಾಸಿ ಐ.ಮೊಹಮ್ಮದ್ ನಿಯಾಜ್ (೩೩) ನಾಪತ್ತೆಯಾಗಿರುವ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇರಳಕಟ್ಟೆಯ ಎಸ್ ಎನ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ನಿಯಾಜ್, ಆ.೨ ರಂದು ತಾಯಿ ಹಾಜಿರಾ ಎಂಬವರಲ್ಲಿ ಬೆಂಗಳೂರಿನಲ್ಲಿ ಕೆಲಸವಿರುವುದಾಗಿ ಹೇಳಿ ಬಟ್ಟೆಗಳನ್ನು ಹಿಡಿದುಕೊಂಡು, ಅದೇ ದಿನ ಮದ್ಯಾಹ್ನ ಪತ್ನಿ ಶಹಳಾಳಿಗೆ ಕರೆ ಮಾಡಿ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ನನ್ನ ತಂಗಿ ಮಗುವನ್ನು ನೋಡಲು ಹೋಗೋಣ ನೀನು ರೆಡಿಯಾಗಿರು ಎಂದು ತಿಳಿಸಿರುವುದಾಗಿ ಹೇಳಿರುತ್ತಾರೆ. ನಂತರ ಆಕೆ ಫೋನಾಯಿಸಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಕುರಿತು ಸಂಬAಧಿಕರ ಮನೆಗಳಲ್ಲಿ ಹುಡುಕಾಡಿದರೂ ನಿಯಾಝ್ ಪತ್ತೆಯಾಗದೇ ಇದ್ದಾಗ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Exit mobile version