ಮುಡಿಪು : ಉಡಿಷಾ ರಾಜ್ಯದ ಕಲಾಹಾಂಡಿ ಜಿಲ್ಲೆ ಉತ್ಕಲ್ ಗ್ರಾಮದ ನಿವಾಸಿಯಾಗಿರುವ ತ್ರಿಶಾ (21) ಎಂಬ ಯುವತಿ, ಜುಲೈ 30, 2025ರಂದು ರಾತ್ರಿ 8 ಗಂಟೆ ಸುಮಾರಿಗೆ, ಮಡಿಪುವಿನಲ್ಲಿ ಇರುವ ಪ್ರಜ್ಞಾ ಸ್ವಧಾರಾ ಕೇಂದ್ರ ಎಂಬ ಮಹಿಳಾ ಆಶ್ರಯ ಕೇಂದ್ರದಿಂದ ನಾಪತ್ತೆಯಾಗಿದ್ದಾರೆ.
ಆಕಾಷ್ ಅವರ ಪುತ್ರಿ ತ್ರಿಶಾ, ಉದ್ಯೋಗದ ಹುಡುಕಾಟದಲ್ಲಿ ಮಂಗಳೂರಿಗೆ ಬಂದಿದ್ದು, ಇತ್ತೀಚೆಗೆ ಮಡಿಪುವಿನ ಆಶ್ರಯ ಮಂದಿರದಲ್ಲಿ ವಾಸವಾಗಿದ್ದರು. ಈಕೆಯು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಿಪು ಪ್ರದೇಶದಿಂದ ಕಾಣೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಕೊಣಾಜೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆ ಸಂಬಂಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ. ಆಶ್ರಯ ಕೇಂದ್ರದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಈಕೆಯ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಪೊಲೀಸ್ ಇಲಾಖೆ ಸಂಪರ್ಕಿಸಲು ಮನವಿ ಮಾಡಲಾಗಿದೆ. ತ್ರಿಶಾ ಬಗ್ಗೆ ಯಾವುದೇ ಮಾಹಿತಿ ಇದ್ದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಕೊಣಾಜೆ ಪೊಲೀಸ್ ಠಾಣೆ ಹಾಗೂ ಮಂಗಳೂರು ನಗರ ಪೊಲೀಸ್ ಇಲಾಖೆ ಕೋರಿವೆ.
