Site icon Ullalavani

ಕೋಟೆಕಾರು ಪಟ್ಟಣ ಪಂಚಾಯತ್‌ ಕೌನ್ಸಿಲರ್‌ ನಿಂದ ವಿದ್ಯಾರ್ಥಿನಿಯರ ಹಾಸ್ಟೆಲ್‌ ವಿರುದ್ಧ ಮುಖ್ಯಾಧಿಕಾರಿ-ಆರೋಗ್ಯ ಅಧಿಕಾರಿಗೆ ದೂರು

ಕೋಟೆಕಾರು:  ಕೋಟೆಕಾರಿನ ವಾರ್ಡ್‌ ನಂಬರ್‌ 11 ರಲ್ಲಿ  ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮಹಿಳಾ ವಿದ್ಯಾರ್ಥಿ ನಿಲಯ ವಿರುದ್ಧ  ಕೌನ್ಸಿಲರ್‌ ಹರೀಶ್‌ ರಾವ್‌ ಅವರು  ಮುಖ್ಯಾಧಿಕಾರಿ ಹಾಗೂ  ಆರೋಗ್ಯ ಅಧಿಕಾರಿಗೆ ದೂರು ನೀಡಿದ್ದಾರೆ.


ಮಡ್ಯಾರ್‌ ನಲ್ಲಿರುವ  ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮಹಿಳಾ ವಿದ್ಯಾರ್ಥಿ ನಿಲಯದ ಶೌಚಾಲಯದ ತ್ಯಾಜ್ಯ ನೀರನ್ನು ನೇರವಾಗಿ ಸಾರ್ವಜನಿಕ ಚರಂಡಿಗೆ ಬಿಡಲಾಗಿದೆ. ಇದರಿಂದ ಚರಂಡಿಗೆ ನೀರು ಹರಿಯುವ ಸುತ್ತಲಿನ ಕೃಷಿಕರಿಗೆ, ಸಮೀಪವೇ ಇರುವ ಕುಡಿಯುವ ನೀರಿನ ಬಾವಿಗಳಿಗೆ ತುಂಬಾ ತೊಂದರೆಯಾಗಿದೆ. ಕೂಡಲೇ  ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.

Exit mobile version