Site icon Ullalavani

ಅರ್ಕಾನ : ಮನೆಗೆ ಉರುಳಿದ ಮರ ಮಗುವಿಗೆ ಗಾಯ

ಉಳ್ಳಾಲ : ತಾಲೂಕಿನ ಪಜೀರು ಗ್ರಾಮದ ಅರ್ಕಾನ ಸಮೀಪ ಮರವೊಂದು ಮನೆ ಮೇಲೆ ಬಿದ್ದು 2ರ ಹರೆಯದ ಮಗು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದು, ಮನೆಗೆ ಹಾನಿಯುಂಟಾಗಿದೆ.


ಮರಿಯಮ್ಮ ಎಂಬವರ ಮನೆಗೆ  ಮರ ಬಿದ್ದಿದ್ದು, ಮೊಮ್ಮಗ ಅಮಾನ್ (2) ಗಾಯಗೊಂಡಿದ್ದಾನೆ. ಘಟನೆಯಲ್ಲಿ ಮನೆ ಸಂಪೂರ್ಣ ಹಾನಿಗೀಡಾಗಿದೆ.  ಗಾಯಾಳು ಮಗುವನ್ನು ತಕ್ಷಣ ನಾಟೆಕಲ್ ಕಣಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಅಮೆರಿಕಾ ಪ್ರವಾಸದಲ್ಲಿರುವ ಸ್ಪೀಕರ್ ಯು.ಟಿ.ಖಾದರ್ ತಕ್ಷಣ ಸ್ಪಂಧಿಸಿ ತಾಲೂಕು ಆಡಳಿತಕ್ಕೆ ನಿರ್ದೇಶಿಸಿದ್ದಾರೆ.  ಅದರಂತೆ ಉಳ್ಳಾಲ ತಾಲೂಕು ತಹಶೀಲ್ದಾರ್, ಕಂದಾಯ ಅಧಿಕಾರಿಗಳು ಹಾಗೂ ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷರು ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಸ್ಥಳೀಯ ಯುವಕರು ಮನೆಮಂದಿಯನ್ನು  ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ಸಹಕರಿಸಿದ್ದಾರೆ. 

Exit mobile version