Site icon Ullalavani

ಉಪ್ಪಿನಂಗಡಿಯ ‘ಮಾಳಿಗೆ ಡಾಕ್ಟರ್’ ಡಾ. ರಾಮಚಂದ್ರ ಭಟ್ ಇನ್ನಿಲ್ಲ

ಉಪ್ಪಿನಂಗಡಿ : ಇಲ್ಲಿನ ವೈದ್ಯ. ಕೆಲ ದಿನಗಳ ಹಿಂದೆ 100ನೇ ವರ್ಷಕ್ಕೆ ಕಾಲಿರಿಸಿದ್ದ ಡಾ.ಮುದ್ರಜೆ ರಾಮಚಂದ್ರ ಭಟ್ ಹೃದಯಾಘಾತದಿಂದ ಸೋಮವಾರ ರಾತ್ರಿ ನೆಕ್ಕಿಲಾಡಿಯ ಅವರ ಮನೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಮೂವರು ಪುತ್ರರು, ಪುತ್ರಿ ಇದ್ದಾರೆ.

1952ರಿಂದ ವೈದ್ಯಕೀಯ ಸೇವೆ ನೀಡುತ್ತಿದ್ದರು. ಉಪ್ಪಿನಂಗಡಿ ಹಳೇ ಬಸ್ ನಿಲ್ದಾಣ ಕಟ್ಟಡದ ಮೊದಲ ಮಹಡಿಯಲ್ಲಿ ಕ್ಲಿನಿಕ್ ತೆರೆದು ಸೇವೆ ನೀಡುತ್ತಿದ್ದು. ಇದೇ ಕಾರಣಕ್ಕೆ ‘ಮಾಳಿಗೆ ಡಾಕ್ಟರ್’ ಎಂದೇ ಹೆಸರಾಗಿದ್ದರು. ಬಡವರಿಗೆ ಉಚಿತ ಔಷಧೋಪಚಾರ ನೀಡುತ್ತಿದ್ದರು.

ಕಾಂಚನ ಲಕ್ಷ್ಮೀನಾರಾಯಣ ಸಂಗೀತ ಶಾಲೆ, ಲಯನ್ಸ್ ಕ್ಲಬ್, ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಶ್ರಮಿಸಿದರು.

Exit mobile version