Site icon Ullalavani

ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ದೇರಳಕಟ್ಟೆ ಕಣಚೂರು ಪಬ್ಲಿಕ್ ಸ್ಕೂಲ್‍ನಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಶಾಲಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಮುಖ್ಯಅತಿಥಿಗಳಾಗಿ ಮಂಗಳೂರು ಸಿ.ಐ.ಎಸ್.ಎಫ್., ಎನ್. ಎಮ್.ಪಿ.ಟಿ ಡೆಪ್ಯುಟಿ ಕಮಾಂಡೆಂಟ್ ಶಿವೇಂದ್ರ ಪ್ರತಾಪ್ ಸಿಂಗ್, ಶಾಲಾ ನಾಯಕನ ಪ್ರತಿಜ್ಞಾ ವಿಧಿಯನ್ನು ಶಾಲಾ ಹಣಕಾಸು ವಿಭಾಗದ ಮುಖ್ಯಸ್ಥೆ ಶಹದಾ ರಹಿಮಾನ್ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಕಣಚೂರು ವಿದ್ಯಾಸಂಸ್ಥೆಯ ಸಂಚಾಲಕ ಅಬ್ದುಲ್ ರಹಿಮಾನ್, ಕಣಚೂರು ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಇಕ್ಬಾಲ್ ಅಹಮ್ಮದ್ ಯು.ಟಿ., ಆನಂದಿ, ಹೇಮಲತಾ, ಲಿನೆಟ್ ಉಪಸ್ಥಿತರಿದ್ದರು.

ತಶ್ರೀಫಾ, ಹಿಭಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಪ್ರಾಂಶುಪಾಲ ರಾಮಚಂದ್ರ ಭಟ್ ಸ್ವಾಗತಿಸಿದರು. ಶಾಲಾ ನಾಯಕಿ ನಿಹಾ ಮಿಥಲ್ ವಂದಿಸಿದರು.

Exit mobile version