Site icon Ullalavani

ಔಷಧಿಯೆಂದು ತಪ್ಪಾಗಿ ಗ್ರಹಿಸಿ ಇಲಿಪಾಷಣ ತಿಂದ  ಹರೇಕಳ ನಿವಾಸಿ ಪೊಲೀಸ್‌ ಪೇದೆ ಚಿಕಿತ್ಸೆ ಫಲಕಾರಿಯಾಗದೆ ಸಾವು

ಹರೇಕಳ :  ಔಷಧಿಯೆಂದು ತಪ್ಪಾಗಿ ಗ್ರಹಿಸಿ ಇಲಿಪಾಷಣ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಂಗಳೂರು ಉತ್ತರ ಸಂಚಾರ ಪೊಲೀಸ್‌ ಠಾಣೆಯ ಪೇದೆ  ಬಾಕ್ರಬೈಲ್‌ ಮಂಜುನಾಥ್‌ ಹೆಗ್ಡೆ (44) ಚಿಕಿತ್ಸೆ ಫಲಕಾರಿಯಾಗದೆ  ನಿನ್ನೆ ಸಾವನ್ನಪ್ಪಿದ್ದಾರೆ.


ಕೆಲ ವರ್ಷಗಳ ಹಿಂದೆ  ಕರ್ತವ್ಯನಿರತ ಮಂಜುನಾಥ್‌ ಹೆಗ್ಡೆ ಅಪಘಾತಕ್ಕೀಡಾಗಿದ್ದರು.  ಬಳಿಕ ನಿರಂತರವಾಗಿ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಯುರ್ವೇದ ಔಷಧಿಯನ್ನು ಪಡೆಯುತ್ತಿದ್ದ ಅವರು ಸುರತ್ಕಲ್‌ ಚೇಳಾಯರು ಬಳಿ ಇದ್ದ ಮನೆಯಲ್ಲಿ  ಔಷಧಿಯೆಂದು ತಪ್ಪಾಗಿ ಗ್ರಹಿಸಿ ಇಲಿ ಪಾಷಣ ಸೇವಿಸಿ ಅಸೌಖ್ಯಕ್ಕೀಡಾಗಿದ್ದರು. ತಕ್ಷಣವ ಅವರನ್ನು  ಸುರತ್ಕಲ್‌ ಶ್ರೀನಿವಾಸ್‌ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಎ.27 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹರೇಕಳ ದೆಬ್ಬೇಲಿ ನಿವಾಸಿಯಾಗಿರುವ ಇವರು ಪೊಲೀಸ್‌ ಪೇದೆ ಸ್ಪೂರ್ತಿ ಹೆಗ್ಡೆ ಬಾಕ್ರಬೈಲ್‌ ಧರ್ಮಚಾವಡಿ ಮಂಜಲ್‌ ಗುತ್ತು ಇವರ ಸಹೋದರನಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 

Exit mobile version