Site icon Ullalavani

ಕೊಲ್ಯ ಸಾರಸ್ವತಕಾಲನಿ ರಿಕ್ಷಾ ಮೇಲೆ ಉರುಳಿದಮರ, ಮೂರು ವಿದ್ಯುತ್ ಕಂಬಗಳು

ಉಳ್ಳಾಲ: ಭಾರೀ ಮಳೆಗೆ ಮರವೊಂದು ಮೂರು ವಿದ್ಯುತ್ ತಂತಿಯ ಮೇಲೆ ಉರುಳಿ ಅದು ರಿಕ್ಷಾ ಮೇಲೆ ಉರುಳಿ ಹಾನಿಗೀಡಾಗಿರುವ ಘಟನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಜಾಯ್ಲಾಂಡ್ ಶಾಲಾ ಸಮೀಪದ ಕೊಲ್ಯ ಸಾರಸ್ವತ ಕಾಲನಿಯಲ್ಲಿ ಇಂದು ನಸುಕಿನ‌ ಜಾವ ಸಂಭವಿಸಿದೆ.
ಮಾಧವ ಗಟ್ಟಿ ಎಂಬವರ ರಿಕ್ಷಾ ಮೇಲೆ ವಿದ್ಯುತ್ ಕಂಬಗಳು ಬಿದ್ದ ಪರಿಣಾಮ, ರಿಕ್ಷಾ ಕೂಡಾ ಪಲ್ಟಿಯಾಗಿ ಭಾಗಶ: ಹಾನಿಗೀಡಾಗಿದೆ. ಮೂರು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿದ ಪರಿಣಾಮ ಸೋಮೇಶ್ವರ – ತೊಕ್ಕೊಟ್ಟು ಒಳಪೇಟೆ ರಸ್ತೆ ಬಂದ್ ಆಗಿದೆ. ನಸುಕಿನ ಜಾವ ಆಗಿರುವುದರಿಂದ ಸ್ಥಳದಲ್ಲಿ ಯಾರೂ ಇರದ ಪರಿಣಾಮ ಸಂಭಾವ್ಯ ಅನಾಹುತ ತಪ್ಪಿದೆ. ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೊಲ್ಯ ಸಾರಸ್ವತ ಕಾಲನಿ

Exit mobile version