Site icon Ullalavani

ರೈಲಿನಡಿಗೆ ಸಿಲುಕಿ ವ್ಯಕ್ತಿ ದುರ್ಮರಣ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ತೊಕ್ಕೊಟ್ಟು ಬಳಿ ರೈಲ್ವೇ ಹಳಿ ದಾಟುತ್ತಿದ್ದ ದೇರಳಕಟ್ಟೆ ಬಗಂಬಿಲ ನಿವಾಸಿ ಅಬ್ಬಾಸ್ (62) ಎಂಬವರು ರೈಲು ಬಡಿದು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಗೋಣಿ ಚೀಲ ವ್ಯಾಪಾರ ನಡೆಸುತ್ತಿದ್ದ ಅಬ್ಬಾಸ್ ತೊಕ್ಕೊಟ್ಟು ಮಂಚಿಲದಲ್ಲಿರುವ ಮಗಳ ಮನೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದ್ದು, ತೊಕ್ಕೊಟ್ಟು ಒಳಪೇಟೆ ಬಳಿಯ ಮಂಚಿಲ ಬಳಿ ರೈಲು ಹಳಿ ದಾಟುತ್ತಿದ್ದಾಗ ಒಂದು ಹಳಿಯಲ್ಲಿ ರೈಲು ಬಂತೆಂದು ಇನ್ನೊಂದು ಹಳಿಗೆ ಇಳಿದಿದ್ದು, ಇನ್ನೊಂದು ಹಳಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಇನ್ನೊಂದು ರೈಲಿನಡಿಗೆ ಸಿಲುಕಿ ಮೃತಪಟ್ಟಿದ್ದು, ರೈಲಿನ ಅಪಘಾತಕ್ಕೆ ಮೃತದೇಹ ಛಿದ್ರಗೊಂಡಿದ್ದು, ಪಕ್ಕದಲ್ಲೇ ಬಿದ್ದಿದ್ದ ಪರ್ಸ್‍ನಲ್ಲಿದ್ದ ಭಾವಚಿತ್ರದಿಂದ ಮೃತರನ್ನು ಗುರುತಿಸಲಾಯಿತು.

ಘಟನಾ ಸ್ಥಳಕ್ಕೆ ಉಳ್ಳಾಲ ಪೆÇಲೀಸರು, ರೈಲ್ವೇ ಪೆÇಲೀಸರು ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.

Exit mobile version