Site icon Ullalavani

ಜೇನುಕೃಷಿ, ಲಾಭದಾಯಕ ಬೆಳೆ,ಹಲಸು ಮೌಲ್ಯವರ್ಧನೆ ಕಾರ್ಯಾಗಾರ

ಮಂಗಳೂರು:ಕೋಟೆಕಾರ್ ಬೀರಿ ಕೆವಿಎಸ್ಎಸ್ ಕನ್ವೆನ್ಶನ್ ಹಾಲ್ ನಲ್ಲಿ ಆಗಸ್ಟ್ 1 ಶುಕ್ರವಾರದಿಂದ 3 ಭಾನುವಾರವರೆಗೆ ನಡೆಯುವ ಉಳ್ಳಾಲ ತಾಲೂಕು ಮಟ್ಟದ ಹಲಸು ಮೇಳ, ಗ್ರಾಮ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಜೇನು ಕೃಷಿ ತರಬೇತಿ, ಲಾಭದಾಯಕ ಬೆಳೆ ಮಾಹಿತಿ, ಹಲಸು ಮೌಲ್ಯವರ್ಧನೆ ‌ಮಾಹಿತಿ, ತೋಟಗಾರಿಕೆ ಇಲಾಖೆ‌ ಸೌಲಭ್ಯ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ.
ಆ.1ರಂದು ಬೆಳಗ್ಗೆ 11ಕ್ಕೆ ತೋಟಗಾರಿಕೆ ಇಲಾಖೆ ಸೌಲಭ್ಯ ಮಾಹಿತಿ, ಆಗಸ್ಟ್ 2ರಂದು ಬೆಳಗ್ಗೆ 11ಕ್ಕೆ ಲಾಭದಾಯಕ ಬೆಳೆ (ಮಲ್ಲಿಗೆ, ಬೆಂಡೆ, ಅಲಸಂಡೆ) ಮಾಹಿತಿ, ಮಧ್ಯಾಹ್ನ 1.30ಕ್ಕೆ ಜೇನು ಕೃಷಿ ಮಾಹಿತಿ, ಆಗಸ್ಟ್ 3ರಂದು ಬೆಳಗ್ಗೆ10 ಗಂಟೆಗೆ ಹಲಸು ಮೌಲ್ಯವರ್ಧನೆ ಕುರಿತು ಕಾರ್ಯಾಗಾರ ನಡೆಯಲಿದೆ. ಭಾಗವಹಿಸಲಿಚ್ಛಿಸುವ ರೈತರು, ಸ್ವೋದ್ಯೋಗಿ ಮಹಿಳೆಯರು

86181 40100 | 90353 18553 ಈ ಸಂಖ್ಯೆ ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಪ್ರಕಟಣೆ ತಿಳಿಸಿದೆ.

Exit mobile version