
ಮಂಗಳೂರು: ಆಟಿ ತಿಂಗಳಲ್ಲಿ ತುಳು ಜನರು ಆಚರಣೆ ಮಾಡುವ ಆಟಿಡೊಂಜಿ ದಿನವನ್ನು “ಆಟಿದ ಪೊಲಬು” ಎಂಬ ಹೆಸರಿನಿಂದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ಮಂಗಳೂರು ಇದರ ಪ್ರಧಾನ ಕಛೇರಿ “ಆತ್ಮಶಕ್ತಿ ಸೌಧ” ಪಡೀಲ್‌ನಲ್ಲಿ ಆಚರಿಸಲಾಯಿತು.
ದೈವರಾಧಕರಾದ ಪೂವಪ್ಪ ಪೂಜಾರಿಯವರು ಹಿಂಗಾರವನ್ನು ಅರಳಿಸುವ ಮೂಲಕ ಸಾಂಪ್ರದಾಯಿಕ ಶೈಲಿಯಲ್ಲಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ದೈವರಾಧಕರಾದ ಪೂವಪ್ಪ ಪೂಜಾರಿ, ನಾಟಿ ವೈದ್ಯರಾದ ತಿಲಕ್‌ರಾಜ್ ಹಾಗೂ ಕಾಸರಗೋಡಿನ ಪೆರಿಯದ ಕೇರಳ ಕೇಂದ್ರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಚೇತನ್ ಮುಂಡಾಜೆ ಯವರನ್ನು ಸಂಘದ ವತಿಯಿಂದ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.
ಕಾಸರಗೋಡಿನ ಪೆರಿಯದ ಕೇರಳ ಕೇಂದ್ರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಚೇತನ್ ಮುಂಡಾಜೆ ಯವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘವು ಇವತ್ತಿನ “ಆಟಿದ ಪೊಲಬು” ಕಾರ್ಯಕ್ರಮದಲ್ಲಿ ದೈವರಾಧಕರು ಹಾಗೂ ನಾಟಿ ವೈದ್ಯರನ್ನು ಸನ್ಮಾನಿಸುವ ಮೂಲಕ ತುಳುನಾಡಿನ ಸಂಸ್ಕöತಿ ಹಾಗೂ ಭಾಷೆಯನ್ನು ಬೆಳೆಸುವ ಕೆಲಸಗಳನ್ನು ಮಾಡುತ್ತಿದೆ. ಇವರುಗಳ ಜೊತೆಯಲ್ಲಿ ನನ್ನನ್ನು ಗುರುತಿಸಿ ಸನ್ಮಾನಿಸಿರುವುದು ತುಂಬಾ ಸಂತೋಷವಾಗುತ್ತಿದೆ. ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರ ನೇತ್ರತ್ವದಲ್ಲಿ “ಆಟಿದ ಪೊಲಬು” ವಿಶಿಷ್ಟವಾದ ಕಾರ್ಯಕ್ರಮವನ್ನು ಆಯೋಜಿಸಿ, ವೇದಿಕೆಯನ್ನು ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣ ಮಾಡಿರುವುದು ಕಾರ್ಯಕ್ರಮದ ಮೆರಗನ್ನು ಇನ್ನೂ ಹೆಚ್ಚಿಸಿದೆ” ಎಂದರು. ಇವರು ಆಟಿ ತಿಂಗಳ ಮಹತ್ವವನ್ನು ಸಂಘದ ಸಿಬ್ಬಂದಿಗಳಿಗೆ ತಿಳಿಸಿದರು.
ನಾಟಿ ವೈದ್ಯರಾದ ಶ್ರೀ ತಿಲಕ್‌ರಾಜ್ ರವರು ನಾಟಿ ಔಷಧಿ ಪದ್ದತಿಗಳ ಬಗ್ಗೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ “ಆಟಿ ತಿಂಗಳಲ್ಲಿ ತುಳು ಜನರು ಆಚರಣೆ ಮಾಡುವ ಆಟಿಡೊಂಜಿ ದಿನವನ್ನು ನಮ್ಮ ಸಂಸ್ಥೆಯಲ್ಲಿ “ಆಟಿದ ಪೊಲಬು” ಎಂಬ ಹೆಸರಿನಿಂದ ಎಲ್ಲಾ ಸಿಬ್ಬಂದಿಗಳ ಪೂರ್ಣ ಸಹಕಾರದಿಂದ ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಾ ಇದ್ದೇವೆ. ಆಟಿದ ಪೊಲಬು ಕಾರ್ಯಕ್ರಮದ ಮುಖ್ಯ ಉದ್ದೇಶ ಪ್ರತಿಯೊಬ್ಬರಿಗೆ ತುಳುನಾಡಿನ ಸಂಸ್ಕöÈತಿಯನ್ನು ಪರಿಚಯಿಸುವುದು. ಇದು ಆತ್ಮಶಕ್ತಿ ಕುಟುಂಬದ ಕಾರ್ಯಕ್ರಮ. ಇದರಲ್ಲಿ ನಮ್ಮ ಸಿಬ್ಬಂದಿಗಳು ಅವರ ಮನೆಯಲ್ಲಿ ತಯಾರು ಮಾಡಿದ ರುಚಿ ರುಚಿಯಾದ ತುಳುನಾಡಿನ ಆಟಿ ತಿಂಗಳಿನ ವಿವಿಧ ತಿಂಡಿ ತಿನಿಸುಗಳು, ಭಕ್ಷ ಭೋಜನಗಳನ್ನು ತಂದಿರುತ್ತಾರೆ. ಅಲ್ಲದೇ ಈ ಬಾರಿಯ ವೇದಿಕೆಯನ್ನು ಆಟಿ ತಿಂಗಳ ಮಹತ್ವವನ್ನು ಸಾರುವ ವಿಷಯವನ್ನು ಅಳವಡಿಸಿ ಅತ್ಯಂತ ಅರ್ಥಪೂರ್ಣವಾಗಿ ನಿರ್ಮಿಸಲಾಗಿದೆ. ಆತ್ಮಶಕ್ತಿ ಎಂಬುದು ಒಂದು ಕುಟುಂಬ ಇದ್ದ ಹಾಗೆ, ಇಲ್ಲಿಯ ಸಿಬ್ಬಂದಿಗಳು ಇಲ್ಲಿಯ ಕೆಲಸವನ್ನು ತನ್ನ ಸ್ವಂತ ಕುಟುಂಬದ ಕೆಲಸ ಎನ್ನುವ ಹಾಗೆ ಮಾಡುತ್ತಾ ಬರುತ್ತಾ ಇದ್ದಾರೆ. ಈ ಆಟಿದ ಕೂಟದ ಯಶಸ್ವಿಗೆ ಸಹಕರಿಸಿದ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಅವರ ಮನೆಯವರಿಗೆ ಧನ್ಯವಾದಗಳನ್ನು ಸಮರ್ಪಣೆ ಮಾಡಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಇದರ ಗೌರವಾಧ್ಯಕ್ಷರಾದ ವಾಮನ್ ಕೆ, ಸಂಘದ ಹಿರಿಯ ಸದಸ್ಯರಾದ ಯು. ಮಾಧವ ಸುವರ್ಣ, ಶೀನ ಪೂಜಾರಿ ಮತ್ತಿತ್ತರರರು ಉಪಸ್ಥಿತರಿದ್ದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾದ ಪರಮೇಶ್ವರ ಜಿ. ಪೂಜಾರಿ, ಆನಂದ್ ಎಸ್ ಕೊಂಡಾಣ, ಸೀತಾರಾಮ್ ಎನ್, ರಮಾನಾಥ್ ಸನಿಲ್, ಮುದ್ದುಮೂಡುಬೆಳ್ಳೆ, ಗೋಪಾಲ್ ಎಮ್, ಉಮಾವತಿ, ಚಂದ್ರಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್,, ಮತ್ತಿತರರು ಭಾಗವಹಿಸಿದರು.
ಸಂಘದ ಹಿರಿಯ ಶಾಖಾಧಿಕಾರಿ ಯಶವಂತಿ ಸ್ವಾಗತಿಸಿ, ಹಿರಿಯ ಶಾಖಾಧಿಕಾರಿ ಸ್ವಾತಿ ವಂದಿಸಿದರು. ಶಾಖಾಧಿಕಾರಿ ಧನಲಕ್ಷಿ÷್ಮÃ ಕಾರ್ಯಕ್ರಮ ನಿರೂಪಿಸಿದರು.