Site icon Ullalavani

ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಪುತ್ರ ನಿಧನ

ಕುತ್ತಾರ್ :  ತಾಲೂಕು ಪಂಚಾಯತ್ ಮಾಜಿ ಸದಸ್ಯೆ ದಯಾವತಿ ಎಂಬವರ ಪುತ್ರ ಕುತ್ತಾರು ನಿವಾಸಿ ಸಚಿನ್ ಕುತ್ತಾರ್ (39)  ಅನಾರೋಗ್ಯದಿಂದಾಗಿ  ಇತ್ತೀಚೆಗೆ ಮನೆಯಲ್ಲಿ ನಿಧನ ಹೊಂದಿದರು.

 
ಬಜಾಜ್ ಅಲಾಯನ್ಸ್ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಚಿನ್ ವಿವಾಹಿತರಾಗಿದ್ದರು. ಕುತ್ತಾರು ಭಾಗದ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದವರು ಒಂದು ತಿಂಗಳಿನಿಂದ ಅನಾರೋಗ್ಯಕ್ಕೀಡಾಗಿ ನಿಧನ ಹೊಂದಿದ್ದಾರೆ.
ನಾರಾಯಣ ಸಪಲ್ಯ- ದಯಾವತಿ  ದಂಪತಿ ಪುತ್ರರಾಗಿರುವ ಸಚಿನ್  ಪತ್ನಿ, ಮಗಳು, ತಂದೆ, ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ. ತಾಯಿ ದಯಾವತಿ ಅವರು ತಾಲೂಕು ಪಂಚಾಯತ್  ಮಾಜಿ ಸದಸ್ಯೆಯಾಗಿದ್ದರು. 

Exit mobile version