Site icon Ullalavani

ಆರೋಪಿ ಶೀಘ್ರ ಬಂಧಿಸದೇ ಇದ್ದಲ್ಲಿ ಠಾಣೆಯೆದುರು ಪ್ರತಿಭಟನೆ :ಮಮತಾ.ಯಸ್. ಗಟ್ಟಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಬೆಳ್ಮ : ಗ್ರಾಮ ಪಂಚಾಯಿತಿ ಎಂಬುದು ರಾಜಕೀಯ ಕೇಂದ್ರವಲ್ಲ, ಅದು ಪಕ್ಷ ರಹಿತ ಕೇಂದ್ರವಾಗಿದ್ದು, ಅಲ್ಲಿಗೆ ಅಕ್ರಮವಾಗಿ ಪ್ರವೇಶಿಸಿ ಗ್ರಾಮದ ಪ್ರಥಮ ಮಹಿಳಾ ಪ್ರಜೆಯ ಮೇಲೆ ದೌರ್ಜನ್ಯ ಎಸಗುವುದು ದುರಾದೃಷ್ಟಕರ ತಪ್ಪಿತಸ್ಥ ಆರೋಪಿಯನ್ನು ಕೂಡಲೇ ಬಂಧಿಸದೇ ಇದ್ದಲ್ಲಿ ಕೊಣಾಜೆ ಠಾಣೆಯೆದುರು ಪ್ರತಿಭಟನೆ ನಡೆಸುವುದಾಗಿ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಮತಾ.ಯಸ್. ಗಟ್ಟಿ ಹೇಳಿದ್ದಾರೆ.

ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಾ ಕೃಷ್ಣಪ್ಪ ಅವರ ಮಾನಭಂಗ ಯತ್ನ ಪ್ರಕರಣವನ್ನು ಖಂಡಿಸಿ ಪಂಚಾಯಿತಿನಲ್ಲಿ ಕಾಂಗ್ರೆಸ್‍ನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರ ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಸೋಮವಾರ ನಡೆದ ಖಂಡನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಗ್ರಾ.ಪಂ.ಗಳಲ್ಲಿ ಶೇ.50 ರಷ್ಟು ಮಹಿಳೆಯರೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಲ್ಲಿದ್ದಾರೆ. ಮಹಿಳೆಯರು ಪ್ರಾಮಾಣಿಕ, ದಕ್ಷತೆ, ಪಕ್ಷಬೇಧ ಮರೆತು ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಮಟ್ಟದಿಂದ ಅಭಿವೃದ್ಧಿ ಪಥದಲ್ಲಿ ಇರುವ ಬೆಳ್ಮ ಪಂಚಾಯಿತಿನ ಅಭಿವೃದ್ಧಿಯಲ್ಲಿ ಅಧ್ಯಕ್ಷೆ ವಿಜಯಾ ಅವರ ಪಾತ್ರ ಬಹಳ ಇದೆ. ಇಂತಹ ಅಧ್ಯಕ್ಷೆ ಮೇಲೆ ದೌರ್ಜನ್ಯ ನಡೆದರೂ ಪೊಲೀಸರು ಮಾತ್ರ ಆರೋಪಿಯನ್ನು ಬಂಧಿಸದೇ ಇರುವುದು ತೀವ್ರ ಕಳವಳಕಾರಿ ಸಂಗತಿ. ಗ್ರಾ.ಪಂ ಅಧ್ಯಕ್ಷೆಯ ಮೇಲೆ ಇಂತಹ ನೀತಿಯಾದರೆ, ಜನಸಾಮಾನ್ಯರು ಬಾಳುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು ಕೂಡಲೇ ಆರೋಪಿಯನ್ನು ಬಂಧಿಸದೇ ಇದ್ದಲ್ಲಿ ಕೊಣಾಜೆ ಠಾಣೆ ಎದುರು ಧರಣಿ ನಡೆಸುವ ಎಚ್ಚರಿಕೆಯನ್ನು ನೀಡಿದರು.

ಮಹಿಳೆಯ ಮೇಲೆ ದೌರ್ಜನ್ಯ ನಡದರೂ ಕೊಣಾಜೆ ಠಾಣಾಧಿಕಾರಿಗಳು ಏನೂ ನಡೆದೇ ಇಲ್ಲವೆಂಬಂತೆ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ. ಘmನೆ ನಡೆದು ನಾಲ್ಕು ದಿನಗಳಾದರೂ ಆರೋಪಿಯನ್ನು ಬಂಧನವಾಗಿಲ್ಲ. 24 ಗಂಟೆಗಳ ಒಳಗೆ ಬಂಧನ ಆಗದೇ ಇರುವಲ್ಲಿ ಕೊಣಾಜೆ ಠಾಣೆ ಎದುರು ಉಗ್ರವಾಗಿ ಪ್ರತಿಭmನೆ ನಡೆಸುವುದು ನಿಶ್ಚಿತ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಎಸ್.ಕರೀಂ ಹೇಳಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ಮುಸ್ತಾಫ, ಬೆಳ್ಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಫಾರುಕ್, ತಾಲೂಕು ಪಂಚಾಯಿತಿ ಸದಸ್ಯರಾದ ಕ್ಲೇರಾ, ಸುರೇಖಾ ಚಂದ್ರಹಾಸ್ , ಮಹಮ್ಮದ್ ಮೋನು, ಮಹಮ್ಮದ್ ಕುಂಞÂ, ಅಂಬ್ಲಮೊಗರು ಗ್ರಾ.ಪಂ ಅಧ್ಯಕ್ಷ ರಫೀಕ್ ಅಂಬ್ಲಮೊಗರು, ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭ ಬೆಳ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಸಹಾಯಕ ಪೊಲೀಸ್ ಆಯುಕ್ತ ಕಲ್ಯಾಣಿ ಶೆಟ್ಟಿ ಅವರಲ್ಲಿ ಆರೋಪಿಯನ್ನು ಕೂಡಲೇ ಪತ್ತೆಹಚ್ಚುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ 24 ಗಂಟೆಯೊಳಗೆ ಬಂಧಿಸುವ ಭರವಸೆಯನ್ನು ನೀಡಿದ್ದಾರೆ

Exit mobile version