Site icon Ullalavani

ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಆಟಿಡೊಂಜಿ ಕೂಡಾಟಿಕೆ – 2025 ಕಾರ್ಯಕ್ರಮವನ್ನು ಆಟಿ ತಿಂಗಳಲ್ಲಿ ತುಳುನಾಡಿನ ಪ್ರಮುಖ ಆಹಾರವಾದ ಒಣಮೀನಿನ ಪದಾರ್ಥ ಮಾಡಿ ಉಪ್ಪು, ಖಾರ ರುಚಿ ನೋಡಿ ಚಾಲನೆ ನೀಡಲಾಯಿತು.

ತೊಕ್ಕೊಟ್ಟು : ತುಳುನಾಡಿನ ವಿಶೇಷ ಪದ್ಧತಿ,ಆಚರಣೆ, ಸಂಸ್ಕೃತಿ ಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ಆಟಿ ತಿಂಗಳಲ್ಲಿ ಪ್ರಸ್ತುತ ಮಾಡುತ್ತಿರುವ ಕಾರ್ಯಕ್ರಮ ಗಳ ಮುಖೇನ ಆಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಹೇಳಿದರು.

ಅವರು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಕುತ್ತಾರಿನ ಎಮ್.ವೈ.ಎಮ್. ಸಭಾಂಗಣದಲ್ಲಿ ನಡೆದ ಆಟಿಡೊಂಜಿ ಕೂಡಾಟಿಕೆ – 2025 ಕಾರ್ಯಕ್ರಮವನ್ನು, ವೇದಿಕೆಯಲ್ಲಿ ಸಿದ್ಧ ಪಡಿಸಿರುವ ಒಣಮೀನಿನ ಪದಾರ್ಥದ ಉಪ್ಪು,ಖಾರ ರುಚಿ ನೋಡಿ ವಿಶಿಷ್ಠವಾಗಿ ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟ್ಟು ವಹಿಸಿದ್ದರು.
ಅತಿಥಿಗಳಾಗಿ ಕೊಲ್ಯ ಬಿಲ್ಲವ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಹರೀಶ್ ಮುಂಡೋಳಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಗೌರವ ಸಲಹೆಗಾರರಾದ ಆನಂದ ಕೆ.ಅಸೈಗೋಳಿ, ಗೌರವಧ್ಯಕ್ಷರಾದ ರಾಕೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ಕಾರ್ಯಕ್ರಮದ ಸಹ ಸಂಚಾಲಕರಾದ ಪ್ರಸಾದ್ ಕೊಂಡಾಣ, ಸುಧಾಕರ ಬಜಾಲ್ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಪ್ರಮುಖರಾದ ದೀಕ್ಷಿತ್ ನಿಸರ್ಗ ಸ್ವಾಗತಿಸಿದರು. ಸಂಚಾಲಕರಾದ ದಾಮೋದರ ನಡಾರ್ ವಂದಿಸಿದರು. ಉಪಾಧ್ಯಕ್ಷ ರಾದ ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂಧರ್ಭದಲ್ಲಿ ಪ್ರತಿಷ್ಠಾನದ ಸದಸ್ಯರು ರಾಜಕೀಯ ಕ್ಷೇತ್ರದಲ್ಲಿ ಸ್ಥಾನ‌ ಪಡೆದಿರುವ ಗಂಗಾಧರ ಅಂಬ್ಲಮೊಗರು, ಸತೀಶ್ ಪೂಜಾರಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ 93% ಅಂಕ ಪಡೆದ ಕು. ಸೂರ್ತಿ ಎಸ್. ಭಂಡಾರಿ ಮತ್ತು ನೃತ್ಯ ದಲ್ಲಿ ಸಾಧನೆಗೈದ ಕು. ನಕ್ಷತ್ರ ನಟರಾಜ್ ಇವರನ್ನು ಅಭಿನಂದಿಸಲಾಯಿತು.
ಬಳಿಕ ಕಾರ್ಯದರ್ಶಿ ಕಿರಣ್ ಕೊಲ್ಯ ನಿರ್ದೇಶನದಲ್ಲಿ ಪ್ರತಿಷ್ಠಾನದ ಸದಸ್ಯರು, ನೃತ್ಯ, ಹಾಸ್ಯ ಪ್ರಹಸನಗಳ ಮೂಲಕ ಮತ್ತು ಕುಟುಂಬದ ಸದಸ್ಯರು ಸಂಗೀತ, ನೃತ್ಯಗಳ ಮೂಲಕ ಮನರಂಜಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಾರ್ಯದರ್ಶಿ ಕೃಷ್ಣ ಪೊನ್ನೆತೋಡು ಮತ್ತು ಹರ್ಷಿತ್ ಬಸ್ತಿ ನಿರ್ವಹಿಸಿದರು. ಕಾರ್ಯಕ್ರಮದ ವಿಶೇಷವಾಗಿ ಹಳೆಯ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳು ಮತ್ತು ಗುಡ್ಡ ಕಾಡುಗಳಲ್ಲಿ ದೊರೆಯುವ ನೈಸರ್ಗಿಕ ಮದ್ದಿನ ಗಿಡಗಳ ಪ್ರದರ್ಶನ ನಡೆಯಿತು. ಬಳಿಕ ಸದಸ್ಯರ ಮನೆಯವರು ಸಿದ್ಧ ಮಾಡಿ ತಂದಿರುವ ಆಟಿ ತಿಂಗಳ ವಿಶೇಷ ತಿನಿಸು, ಪದಾರ್ಥಗಳ ಸವಿ ಬೋಜನ ನಡೆಯಿತು.

Exit mobile version