ಸಂಕೊಳಿಗೆ : ಇಲ್ಲಿನ ಭಗವತೀ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಮಿತಿ ವತಿಯಿಂದ ಆಟಿದ ಕೂಡಾಟಿಕೆಡ್ ಒಂಜಿ ದಿನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಭಗವತೀ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ದಿನಕರ್ ಉಳ್ಳಾಲ್ ಮತ್ತು ಟ್ರಸ್ಟಿ ಸದಾಶಿವ ಉಳ್ಳಾಲ್ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ 2024-25 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಮೇಧ.ಜೆ.ಬಿ, ವರ್ಷಿಣಿ ರೈ, ತೇಜಸ್ವಿನಿ.ವಿ.ವೈ, ಹಿರಾಲ್.ಎಸ್.ಬಂಗೇರ ಇವರನ್ನು ಅಭಿನಂದಿಸಲಾಯಿತು.
ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ರಾಘವ ಉಚ್ಚಿಲ್, ಕೋಶಾಧಿಕಾರಿ ಮಾಧವ ತಲಪಾಡಿ ಟ್ರಸ್ಟಿ ಶ್ರೀಮತಿ ಗಜಲಕ್ಷ್ಮಿ, ಭಗವತೀ ಶಾಲೆಯ ಮುಖ್ಯ ಶಿಕ್ಷಕಿಯರಾದ ಪ್ರಮೀಳಾ ಶಾಂತರಾಮ್, ಭಗವತೀ ಶಾಲೆಯ ಪೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷರಾದ ಸುನೀತ ಮತ್ತು ಅಮೃತ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸದಸ್ಯರ ಮನೆಯವರು ಸಿದ್ಧ ಪಡಿಸಿರುವ ಆಟಿ ತಿಂಗಳ ಸುಮಾರು 35 ಬಗೆಯ ವಿವಿಧ ಆಹಾರ ಪದಾರ್ಥಗಳನ್ನು ಎಲ್ಲರೂ ಸವಿದರು. ಕಾರ್ಯಕ್ರಮದಲ್ಲಿ ಸದಸ್ಯರಾದ ಸುಮ, ಕವಿತ ಸುರೇಶ್, ಕವಿತ ಶೆಟ್ಟಿ, ಪ್ರಫುಲ್ಲಾ, ಲಕ್ಷ್ಮಿಹರೀಶ್, ವನಿತ, ಸುಷ್ಮಾ ಸಾಲಿಯಾನ್, ರೂಪ ಹೆಗ್ಡೆ, ಚಿತ್ರಲೇಖಾ, ಲಕ್ಷ್ಮೀ ಶ್ರಣೈ, ಅಕ್ಷಿತ, ಸ್ವಾತಿ, ಜ್ಯೋತಿ, ಅನಿತ, ಶಿಲ್ಪಸುವರ್ಣ, ವಿಭಾ, ಮೋಹಿನಿ, ಸ್ವಾತಿ, ಅಶ್ವಿನಿ, ಪದ್ಮಿನಿ, ಕುಶಲ, ಸುವ್ಯ ಶೆಟ್ಟಿ, ಸಬಿತ, ಜಯಲಕ್ಷ್ಮಿ, ಜ್ಯೋತಿ, ಸೌಮ್ಯ, ಚಿತ್ರ, ರವಿಕಿರಣ್, ಸುದರ್ಶನ್ ಬಂಗೇರ, ಶಶಿಧರ್ ಕೊಂಡಾಣ ಉಪಸ್ಥಿತರಿದ್ದರು.
ರಕ್ಷಕ ಶಿಕ್ಷಕ ಪ್ರಾಥಮಿಕ ವಿಭಾಗದ ಉಪಾಧ್ಯಕ್ಷರಾದ ಪ್ರವೀಣ್ ಬಸ್ತಿ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿದರು.
