Site icon Ullalavani

ಕರಂಬಾರು : ಉಚಿತ ಕನ್ನಡಕ ವಿತರಣೆ

ಬಜ್ಪೆ : ಇನ್ನರ್ ವೀಲ್ ಕ್ಲಬ್ ಮಂಗಳೂರು ದಕ್ಷಿಣ ಮತ್ತು ನಾಗರಿಕ ಸೇವಾ ಸಮಿತಿ ಅಂಬೇಡ್ಕರ್ ನಗರ ಕರಂಬಾರು ಆಶ್ರಯದಲ್ಲಿ ‘ನಮ್ಮ ಕ್ಲಿನಿಕ್ ಮಳವೂರು’ ಸಭಾಂಗಣದಲ್ಲಿ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ 66 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು.

ಇನ್ನರ್ ವೀಲ್ ಮಂಗಳೂರು ದಕ್ಷಿಣದ ಅಧ್ಯಕ್ಷ ಶೀಜಾ ನಂಬ್ಯಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಭೋಜರಾಜ್ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ನಮ್ಮ ಕ್ಲಿನಿಕ್‌ನ ವೈದ್ಯಾಧಿಕಾರಿ ಸಮೀಕ್ಷಾ ಡಿ.ಪಿ. ಭಾಗವಹಿಸಿದ್ದರು. ಇನ್ನ‌ರ್ ವೀಲ್ ಕ್ಲಬ್‌ನ ಕಾರ್ಯದರ್ಶಿ ಕಲಾವತಿ, ಮಾಜಿ ಅಧ್ಯಕ್ಷೆ ಶಬರಿ ಭಂಡಾರಿ, ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸೈಯದ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ, ಯುವವಾಹಿನಿ ಕೆಂಜಾರು ಕರಂಬಾರು ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಮಾಧವ ಅಮೀನ್ ಕೆಂಜಾರು, ಗ್ರಾಪಂ ಮಾಜಿ ಸದಸ್ಯೆ ಶಶಿಕಲಾ ಉಪಸ್ಥಿತರಿದ್ದರು.

ವಿನಯ್ ಸಾಲ್ಯಾನ್ ಸ್ವಾಗತಿಸಿದರು. ನವೀನ್‌ಚಂದ್ರ ಸಾಲ್ಯಾನ್ ವಂದಿಸಿದರು. ರಾಕೇಶ್ ಕುಂದ‌ರ್ ಕಾರ್ಯಕ್ರಮ ನಿರೂಪಿಸಿದರು.

Exit mobile version