ಮುಡಿಪು : ಮುಡಿಪುವಿನಲ್ಲಿ ಎಲ್ ಐಸಿ ಆಫೀಸ್ ಹೊಂದಿ, ಸರಸ್ವತಿ ಕೋ ಆಪರೇಟಿವ್ ಸೊಸೈಟಿ ಬ್ಯಾಂಕಿನಲ್ಲಿ ಪಿಗ್ಮೀ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಂಜೇಶ್ವರ ಪಾವುಲ ನಿವಾಸಿ ರಮೇಶ್ ಶೆಟ್ಟಿ (49) ಎಂಬವರು ನಾಪತ್ತೆಯಾಗಿರುವ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಡಿಪುವಿನಲ್ಲಿ ಎಲ್ ಐಸಿ ಆಫೀಸ್ ಹೊಂದಿದ್ದ ರಮೇಶ್ ಶೆಟ್ಟಿ ಇವರು ಪಿಗ್ಮೀ ಕಲೆಕ್ಟರ್ ಕೂಡಾ ಆಗಿದ್ದರು. ಜು.17ರಂದು ಮನೆಯಿಂದ ಬೆಳಿಗ್ಗೆ 6.45ರ ಹೊತ್ತಿಗೆ ಕೆಲಸಕ್ಕೆ ತೆರಳಿದವರು ವಾಪಸ್ಸಾಗಿಲ್ಲ. ಈ ಕುರಿತು ಎಲ್ ಐಸಿ ಕಚೇರಿ ಸಮೀಪವಿರುವ ಲಾಂಡ್ರಿ ಅಂಗಡಿ ಸದಾಶಿವ ಎಂಬವರಲ್ಲಿ ವಿಚಾರಿಸಿದಾಗ ಬೆ. 8.1೦ಕ್ಕೆ ಮಂಗಳೂರಿಗೆ ಹೋಗುವುದಾಗಿ ತಿಳಿಸಿ ತೆರಳಿದ್ದರು ಎಂಬ ಮಾಹಿತಿ ನೀಡಿದ್ದಾರೆ. ಎಲ್ಲಾ ಕಡೆಗಳಲ್ಲಿ ಹುಡುಕಾಡಿ, ಸಂಬಂಧಿಕರಲ್ಲಿಯೂ ವಿಚಾರಿಸಿ ರಮೇಶ್ ಅವರ ಪತ್ತೆಯಾಗದ ಕಾರಣ ತಡವಾಗಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪುತ್ರ ರಕ್ಷತ್ ಆರ್ ಶೆಟ್ಟಿ ದೂರು ನೀಡಿರುವಂತೆ ಪ್ರಕರಣ ದಾಖಲಾಗಿದೆ.