ಉಳ್ಳಾಲ : ಸಮನ್ವಯ ಶಿಕ್ಷಕರ ಸಂಘದ ಉಳ್ಳಾಲ ಘಟಕವನ್ನು ಶನಿವಾರ ಉಳ್ಳಾಲ ಹಳೆಕೋಟೆ ಸೈಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಲಾಯಿತು. ಉಳ್ಳಾಲ ಹಾಗೂ ಮಂಗಳೂರು ಘಟಕದ ಅಧ್ಯಕ್ಷ ಬಿ.ಎಂ. ರಫೀಕ್ ತುಂಬೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕ ಬಿ. ಮುಹಮ್ಮದ್ ತುಂಬೆ ಭಾಗವಹಿಸಿ ಮಾತನಾಡಿದರು.
ಸಮನ್ವಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ ಸಮನ್ವಯವು ಜಿಲ್ಲೆಯಲ್ಲಿ ಶೈಕ್ಷಣಿಕ ಮತ್ತು ಮಾನವೀಯ ನೆಲೆಯಲ್ಲಿ ಕಾರ್ಯಚರಿಸುತ್ತದೆ ಎಂದರು.
ಒತ್ತಡ ನಿರ್ವಹಣೆ ಹೇಗೆ ಎಂಬುವುದರ ಬಗ್ಗೆ ಕಣಚೂರು ಆಸ್ಪತ್ರೆಯ ಆಡಳಿತಾಧಿಕಾರಿ ರೋಹನ್ ಮೋನಿಶ್ ಕಾರ್ಯಾಗಾರ ನಡೆಸಿದರು. ವೇದಿಕೆಯಲ್ಲಿ ಬಂಟ್ವಾಳ ಘಟಕದ ಪ್ರಧಾನ ಕಾರ್ಯದರ್ಶಿ ಹರೀಶ್ ಬಾಂಬಿಲ ಉಪಸ್ಥಿತರಿದ್ದರು.
ಸಮನ್ವಯದ ಸ್ಥಾಪಕ ಅಧ್ಯಕ್ಷ ಕೆಎಂಕೆ ಮಂಜನಾಡಿ ಸ್ವಾಗತಿಸಿದರು. ಉಳ್ಳಾಲ ಘಟಕದ ಕಾರ್ಯದರ್ಶಿ ರಸೂಲ್ ಖಾನ್ ಕಾರ್ಯಕ್ರಮ ನಿರೂಪಿಸಿದರು. ಬಾಮಿ ಶಾಲೆಯ ಮುಖ್ಯ ಶಿಕ್ಷಕ ನಾಸಿರ್ ವಂದಿಸಿದರು.
