Site icon Ullalavani

ಮನೆ ಖಾಲಿ ಮಾಡಿ ಮೃತಪಟ್ಟ ವ್ಯಕ್ತಿ

ಉಳ್ಳಾಲ : ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಉಳ್ಳಾಲದ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ, ಇದೇ ವೇಳೆ ಮಿಲ್ಲತ್‌ ನಗರದಲ್ಲಿ ಮನೆಯೊಂದಕ್ಕೆ ನೀರು ನುಗ್ಗಿದ್ದು ಮನೆ ಖಾಲಿ ಮಾಡಿದ ಕೆಲವೇ ಕ್ಷಣಗಳಲ್ಲಿ ಮನೆ ಯಜಮಾನ ಮೃತಪಟ್ಟಿದ್ದಾರೆ.


ಮಿಲ್ಲತ್ ನಗರ ನಿವಾಸಿ ರಫೀಕ್ (55) ಎಂಬವರು ಮೃತರು. ಇವರ ಮನೆಯೊಳಗೆ ಮಳೆ ನೀರು ನುಗ್ಗಿದ್ದರಿಂದ ಮನೆಯೊಳಗಿದ್ದ ಸಾಮಗ್ರಿಗಳನ್ನು ಖಾಲಿ ಮಾಡಿ ಸಂಬಂಧಿಕರ ಮನೆಗೆ ಹೊರಟಿದ್ದರು. ಇದೇ ವೇಳೆ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಸಂದರ್ಭ ದಾರಿಮಧ್ಯೆ ಮೃತಪಟ್ಟಿದ್ದಾರೆ.

ಉಳ್ಳಾಲ‌ ದರ್ಗಾ ಸಮಿತಿಯ ಸದಸ್ಯರಾಗಿದ್ದರು. ಮೃತರು ಪತ್ನಿ, ಗಂಡು ಮತ್ತು ನಾಲ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Exit mobile version