Site icon Ullalavani

ಆಹಾರ ಪ್ರಿಯರಿಗೆ ಸಿಹಿಸುದ್ಧಿ , ಉಳ್ಳಾಲ ತಾಲೂಕಿನಲ್ಲೇ ಪ್ರಪ್ರಥಮ ಬಾರಿಗೆ ಹಲಸು ಮೇಳ , ಆಗಸ್ಟ್ 2 ಮತ್ತು 3 ರಂದು ಅದ್ಧೂರಿಯಾಗಿ ಬೀರಿ ಕೆ.ವಿ.ಎಸ್.ಎಸ್ ಕನ್ವೆನ್ಶನ್ ಹಾಲ್ ನಲ್ಲಿ ಆಯೋಜನೆ

ಉಳ್ಳಾಲ: ಉಳ್ಳಾಲ ತಾಲೂಕಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ, ಹಲಸು ಮೇಳ, ಆಟಿ ಆಹಾರೋತ್ಸವ, ಮತ್ತು ಕೃಷಿ ಪ್ರೇರಣೆ ಚಟುವಟಿಕೆಗಳು ಆ. 2 ಮತ್ತು 3 ರ ಶನಿವಾರ ಮತ್ತು ಭಾನುವಾರ ದಂದು ಅದ್ಧೂರಿಯಾಗಿ ಜರಗಲಿದೆ.

ಈ ವಿಶೇಷ ಕಾರ್ಯಕ್ರಮವನ್ನು ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘ (K.V.S.S.) ಮುಂಚೂಣಿಯಲ್ಲಿದ್ದು, ಮಾಧ್ಯಮ ಕೇಂದ್ರ ತೊಕ್ಕೊಟ್ಟು ಮತ್ತು ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದಲ್ಲಿ ಆಯೋಜಿಸಲಾಗಿದೆ. ಈ ಮೇಳದ ಮುಖ್ಯ ಆಕರ್ಷಣೆಗಳಲ್ಲೊಂದು ಹಲಸಿನ ನಾನಾ ಬಗೆಯ ಪೈರುಗಳು, ಉತ್ಪನ್ನಗಳು, ಹಾಗೂ ಜನಪರ ಪರಂಪರೆಯ ಆಟಿ ಆಹಾರ. ಜೊತೆಗೆ, ಕೃಷಿಕರಿಗೆ ಪ್ರೇರಣೆ ನೀಡುವ ಕಾರ್ಯಾಗಾರಗಳು, ಸುಸ್ಥಿರ ಕೃಷಿ ತಂತ್ರಗಳು ಹಾಗೂ ಸ್ಥಳೀಯ ಉತ್ಪನ್ನಗಳ ಪ್ರದರ್ಶನವೂ ಇರಲಿದೆ. ಮೀಡಿಯಾ ಪಾರ್ಟ್ನರ್‌ ಆಗಿ ಉಳ್ಳಾಲವಾಣಿ ಇದ್ದು, Bee Bharath Honey Farm ಮತ್ತು Udupi Naturals ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಈ ಕಾರ್ಯಕ್ರಮವು ಉಳ್ಳಾಲದ ಕೃಷಿಕರ, ಆಹಾರ ಪ್ರಿಯರ, ಮತ್ತು ಪರಿಸರಾಭಿಮಾನಿಗಳಿಗಾಗಿ ಒಂದು ವಿಶಿಷ್ಟ ವೇದಿಕೆಯಾಗಲಿದ್ದು, ಎಲ್ಲರಿಗೂ ಮುಕ್ತ ಆಹ್ವಾನ.


ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
📞 [9449318553, 8618140100]
📧

Exit mobile version