Site icon Ullalavani

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಕೃಷ್ಣಾಪುರ ಶಾಖೆಯ ಗ್ರಾಹಕರ ಸಭೆ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೃಷ್ಣಾಪುರ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಕೃಷ್ಣಾಪುರ ಶಾಖೆಯಲ್ಲಿ ಜರುಗಿತು.


ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಪಿ.ಕೆ ಉಪಧ್ಯಾಯ, ಶ್ರೀನಿವಾಸ್ ರಾವ್, ರಾಧ, ಅಬ್ದುಲ್ ಖಾದರ್ ಹಾಗೂ ದೀಕ್ಷಿತ ರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.
ಸಂಘದ ಸದಸ್ಯರಾದ ಪಿ.ಕೆ ಉಪಾಧ್ಯಯ ರವರು ಮಾತನಾಡಿ “ಸಹಕಾರ ಸಂಘಗಳಲ್ಲಿ ಬೆಳವಣಿಗೆಯಲ್ಲಿ ಠೇವಣಿದಾರರು ಹಾಗೂ ಸಾಲಗಾರರ ಪಾತ್ರ ತುಂಬಾ ಮಹತ್ವದಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರ ಸಭೆಯನ್ನು ಆಯೋಜಿಸಿ ಸಂಘದ ಗ್ರಾಹಕರನ್ನು ನೆನೆಪಿಸಿಕೊಳ್ಳುವ ಕಾರ್ಯ ಮಾಡಿರುವುದು ಶ್ಲಾಘನೀಯ” ವೆಂದರು.
ಶ್ರೀ ಪಿ.ಎಚ್.ಎಂ ರಫೀಕ್ ರವರು ಮಾತನಾಡಿ “ಕೃಷ್ಣಾಪುರ ಶಾಖೆಯಲ್ಲಿ ಸಿಬ್ಬಂದಿಗಳ ಸೇವೆಯು ಉತ್ತಮವಾಗಿದ್ದು, ಇದು ಶಾಖೆಯ ಬೆಳವಣಿಗೆಗೆ ಕಾರಣ. ಆತ್ಮಶಕ್ತಿಯು ಹೀಗೆಯೆ ಉತ್ತಮ ಸೇವೆಗಳನ್ನು ನೀಡುತ್ತಾ ಇನ್ನಷ್ಟೂ ಬೆಳಗಲಿ” ಎಂದು ಶುಭಹಾರೈಸಿದರು.
ಯಶಸ್ವಿನಿ ರವರು ಮಾತನಾಡಿ “ಆತ್ಮಶಕ್ತಿಯು ಬ್ಯಾಂಕಿಂಗ್ ಸೌಲಭ್ಯಗಳನ್ನು ಗ್ರಾಹಕ ಸ್ನೇಹಿ ಸೇವೆ ನೀಡುವುದರ ಮೂಲಕ ಮನೆ ಬಾಗಿಲಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ” ಎಂದು ಪ್ರಶಂಸಿಸಿದರು.

ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಸಂಘದ ಸದಸ್ಯ ಗ್ರಾಹಕರಿಗೆ ಚಿನ್ನಾಭರಣಗಳಿಗೆ ಅಧಿಕ ಮೌಲ್ಯದೊಂದಿಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲಗಳನ್ನು ನೀಡುತ್ತಿದ್ದೇವೆ. ಈಗಾಗಲೇ ರೂ. 1೦೦ ಕೋಟಿಗೂ ಮಿಕ್ಕಿ ಚಿನ್ನಾಭರಣ ಸಾಲವನ್ನು ಸಂಘವು ಹೊಂದಿದ್ದು, ರೂ. 2೦೦ ಕೋಟಿಗೂ ಮಿಕ್ಕಿ ಬಂಡಳವಾಳವನ್ನು ಚಿನ್ನಾಭರಣ ಸಾಲ ನೀಡಲು ಈ ಆರ್ಥಿಕ ವರ್ಷದಲ್ಲಿ ತೊಡಗಿಸಿಕೊಂಡಿದ್ದೇವೆ. ಸಂಸ್ಥೆಯು ಕೇವಲ ಬ್ಯಾಂಕಿಂಗ್ ಮಾತ್ರವಲ್ಲದೆ ಜೀವ ವಿಮೆ, ಆರೋಗ್ಯ ವಿಮೆ, ಮತ್ತು ವಾಹನ ವಿಮಾ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಸುಮಾರು 86ಕ್ಕೂ ಮಿಕ್ಕಿ ಉಚಿತ ಆರೋಗ್ಯ ಶಿಬಿರಗಳನ್ನು ಸಂಘವು ಆಯೋಜಿಸಿ ಜನರ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸುವಂತೆ ಮಾಡುತ್ತಿದೆ. ಜೊತೆಗೆ ಸಂಘದ ಸದಸ್ಯರ ಮಕ್ಕಳಿಗೆ ಒಳ್ಳೆಯ ಅಂಕ ಬಂದಾಗ ವಿದ್ಯಾರ್ಥಿ ವೇತನ ನೀಡಿ ಅವರನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಸಂಘದಲ್ಲಿ ಲಭ್ಯವಿರುವ ಪ್ರತಿಯೊಂದು ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ರಮಾನಾಥ ಸನಿಲ್, ಮುಖ್ಯ ಕಾರ್ಯನಿರ್ವಹಣಾದಿಕಾರಿ ಸೌಮ್ಯ ವಿಜಯ್ ಮತ್ತಿತ್ತರರು ಉಪಸ್ಥಿತರಿದ್ದರು.
ಸಂಘದ ಕೃಷ್ಣಾಪುರ ಶಾಖೆಯ ಸಿಬ್ಬಂದಿಯಾದ ಶ್ರುತಿಕುಮಾರಿ ಸ್ವಾಗತಿಸಿ , ಅಶ್ವಿನಿ ವಂದಿಸಿದರು. ಶಾಖಾಧಿಕಾರಿ ಸುಜಾತ ಕಾರ್ಯಕ್ರಮ ನಿರೂಪಿಸಿದರು.

Exit mobile version