Site icon Ullalavani

ಪದಂಗಡಿ ಟಯರ್ ಶಾಪ್ ನಲ್ಲಿ ಕುಸಿದುಬಿದ್ದು ಪಂಡಿತ್‌ಹೌಸ್ ನಿವಾಸಿ ಹೃದಯಘಾತದಿಂದ ಸಾವು


ಪಂಡಿತ್‌ಹೌಸ್: ಟಯರ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗಲೇ ಪಂಡಿತ್ ಹೌಸ್ ನಿವಾಸಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರು ಪದಂಗಡಿ ಅಜ್ಜನಕಟ್ಟೆ ಸಮೀಪದ ಟಯರ್ ಅಂಗಡಿಯಲ್ಲಿ ನಡೆದಿದೆ.
ಪಂಡಿತ್ ಹೌಸ್, ವಿಜೇತನಗರ ಗಂಡಿ ನಿವಾಸಿ ವೇಣುಗೋಪಾಲ(40) ಸಾವನ್ನಪ್ಪಿದವರು. ಹಲವು ವರ್ಷಗಳಿಂದ ಟಯರ್ ಶಾಪ್ ನಲ್ಲಿ ಟೆಕ್ನೀಷಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಣುಗೋಪಾಲ್, ಇಂದು ಸಂಜೆ ವೇಳೆ ಕೆಲಸ ನಿರ್ವಹಿಸುತ್ತಿದ್ದಾಗಲೇ ಕುಸಿದುಬಿದ್ದಿದ್ದರು. ಬಳಿಕ ಮೃತಪಟ್ಟಿದ್ದಾರೆ. ಹೃದಯಘಾತಕ್ಕೀಡಾಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಅವಿವಾಹಿತರಾಗಿರುವ ಇವರು ತಾಯಿ , ಇಬ್ಬರು ಸಹೋದರಿಯರು, ಓರ್ವ ಸಹೋದರನನ್ನು ಅಗಲಿದ್ದಾರೆ.

Exit mobile version