Site icon Ullalavani

ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ನಿವೃತ್ತ ಶಿಕ್ಷಕರು, ಪ್ರಗತಿಪರ ಕೃಷಿಕರಾದ ಪಿಲಾರು ಸುಬ್ರಾಯ ಗಟ್ಟಿಯವರಿಗೆ ಗುರುವಂದನೆ

ಉಳ್ಳಾಲ : ಹಿಂದೂ ಧರ್ಮದಲ್ಲಿ ಗುರುವಿಗೆ ಮಹತ್ತರವಾದ ಸ್ಥಾನವಿದೆ. ಸುಬ್ರಾಯ ಗಟ್ಟಿಯವರ ಮೌಲ್ಯಾಧಾರಿತ ಜೀವನ ನನಗೂ ಪ್ರೇರಣೆಯಾಗಿದೆ. 95 ವರುಷದ ಹಿರಿತನದಲ್ಲಿಯೂ ಅವರ ಸುಧೃಡ ಆರೋಗ್ಯ, ಶ್ರವಣೇಂದ್ರಿಯ ಶಕ್ತಿಗಳು ಶಿಸ್ತುಬದ್ಧವಾದ ಜೀವನ ಕಿರಿಯರಾದ ನಮಗೆಲ್ಲರಿಗೂ ಪಾಠವಾಗಿದೆ ಎಂದು  ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್‌ ಕುಂಪಲ ಹೇಳಿದರು
ಗುರುಪೂರ್ಣಿಮೆಯ ಪ್ರಯುಕ್ತ ತೊಕ್ಕೊಟಿನ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ನಿವೃತ್ತ ಶಿಕ್ಷಕರು, ಪ್ರಗತಿಪರ ಕೃಷಿಕರಾದ ಪಿಲಾರು ಸುಬ್ರಾಯ ಗಟ್ಟಿ ಯವರಿಗೆ ಅವರ ಸ್ವಗೃಹದಲ್ಲಿ ಅವರ ಧರ್ಮಪತ್ನಿ ಪಾರ್ವತಿ ಯವರ ಜತೆಯಲ್ಲಿ ಗುರುವಂದನೆ ಅರ್ಪಿಸಿ ಬಳಿಕ ಮಾತನಾಡಿದರು.


ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ರವರು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಪ್ರತಿಷ್ಠಾನವು ರಾಷ್ಟ್ರಭಕ್ತನ ಹೆಸರಿಗೆ ತಕ್ಕಂತೆ ಸಮಾಜದಲ್ಲಿ ಉತ್ತಮವಾದ ಕೆಲಸ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವ ಸಂಸ್ಥೆಯಾಗಿದೆ. ವಿಜಯ ಸಿಂಧೂರ ಸಾಹಸ ದಂತಹ ರಾಷ್ಟ್ರ ಜಾಗೃತಿ‌ ಕಾರ್ಯಕ್ರಮ ಮೂಲಕ ಮಕ್ಕಳಲ್ಲಿ ದೇಶಭಕ್ತಿ ಜಾಗರಣೆ, ಗುರುವಂದನೆ ಕಾರ್ಯಕ್ರಮ ಮೂಲಕ ಸಂಸ್ಕಾರವನ್ನು ಬೆಳೆಸುತ್ತಿದೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟ್ಟು  ಅಧ್ಯಕ್ಷತೆ ವಹಿಸಿದ್ದರು.  ಪ್ರತಿಷ್ಠಾನದ ಗೌರವಧ್ಯಕ್ಷರಾದ ರಾಕೇಶ್ ಕುಮಾರ್, ಗುರುವಂದನೆ ಸಂಚಾಲಕರಾದ ರಾಜೇಂದ್ರ ಸೇವಂತಿಗುಡ್ಡೆ, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ಪ್ರಮುಖರಾದ ಮೋಹನ್ ಸಾಲ್ಯಾನ್, ದಾಮೋದರ ನಡಾರ್, ಶರತ್ ಶೆಟ್ಟಿ ಪನೀರ್, ದೀಕ್ಷಿತ್ ನಿಸರ್ಗ, ಸುಧಾಕರ್ ಬಜಾಲ್, ಗಂಗಾಧರ ಅಂಬ್ಲಮೊಗರು, ಬೃಜೇಶ್ ನಾಯರ್, ಇತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಪೊನ್ನೆತ್ತೋಡು ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ರಾದ ಪ್ರವೀಣ್ ಬಸ್ತಿ ವಂದಿಸಿದರು.

Exit mobile version